Sankranti News:
ವರ್ಷದ ಆರಂಭದಲ್ಲಿ ಹೊಸ್ತಿಲಲ್ಲಿ ಬರುವ ಮೊದಲನೆಯ ಹಬ್ಬ ಸಂಕ್ರಾಂತಿ ಕಬ್ಬು ಎಳ್ಳು ಬೆಲ್ಲವನ್ನು ಸವಿದು , ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸಿದ್ದರೆ ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲ್ಪಡುತ್ತದೆ.
ಆದರೆ ಇಂದುರಾಜಧಾನಿ ಬೆಂಗಳೂರಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ತಿಲಕ್ ನಗರದಲ್ಲಿ ಯಾವುದೇ ಭೇದವಿಲ್ಲದೆ ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬವನ್ನು ಒಟ್ಟಿಗೆ ಆಚರಿಸಲಾಯಿತ್ತು. ಆ ಹಬ್ಬದ ವಿಶೇಷ ಸುದ್ದಿ ಇಲ್ಲಿದೆ ನೋಡಿ…
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಜಯನಗರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದರು. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ತಮಿಳು ಹಾಗೂ ಕನ್ನಡ ಮಾತನಾಡುವ ನಿವಾಸಿಗಳಿದು ಪೊಂಗಲ್ ಹಾಗೂ ಸಂಕ್ರಾಂತಿಯನ್ನ ಒಟ್ಟಿಗೆ ಆಚರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ
ಹೊಸ ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ ಇನ್ನು ನಮ್ಮ ಈ ಕ್ಷೇತ್ರದಲ್ಲಿ ನಮ್ಮ ತಮಿಳು ಕುಟುಂಬ ಕೂಡ ಹೆಚ್ಚಾಗಿರುವುದರಿಂದ ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬವನ್ನು ಒಟ್ಟಿಗೆ ಆಚರಿಸಲು ನಮ್ಮ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದರು ಆದ್ದರಿಂದ ಇಂದು ಸಂಕ್ರಾಂತಿ ಮತ್ತು ಪೊಂಗಲ್ ಒಟ್ಟಿಗೆ ಆಚರಿಸುತ್ತಿದ್ದೇವೆ. ಈ ರೀತಿಯ ಕಾರ್ಯಕ್ರಮಗಳನ್ನು ಹಬ್ಬವನ್ನು ನಮ್ಮ ಕುಟುಂಬದ ಜೊತೆ ಆಚರಿಸಲು ಇಷ್ಟಪಡುತ್ತೇವೆ. ನಮ್ಮ ಕ್ಷೇತ್ರದ ಜನ ನಮ್ಮ ಕುಟುಂಬದವರು ಆದ್ದರಿಂದ ನನಗೆ ಈ ರೀತಿ ಕಾರ್ಯಕ್ರಮಗಳು ಬಹಳಷ್ಟು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಜಯನಗರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಮುಖ್ಯ ಆಯೋಜಿಕರಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ
ಬಿ.ಜೆ. ಪಿ. ಟಿಕೆಟ್ ಆಕಾಂಕ್ಷಿ
ಸಿ ಕೆ ರಾಮಮೂರ್ತಿ ಮಾತನಾಡಿ ಈ ರೀತಿ ಕಾರ್ಯಕ್ರಮಗಳನ್ನ ಇದಕ್ಕೂ ಮುನ್ನ ಯಾರು ಕೂಡ ಮಾಡಿಲ್ಲ ಆದರೆ ಇಂದು ಬಿಜೆಪಿ ಪಾರ್ಟಿ ವತಿಯಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾವು ಜಯನಗರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದು ಪಕ್ಷದ ಮುಖಂಡರು ಹಾಗೂ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿಸಿದ್ದೇವೆ. ಇನ್ನು ಈ ರೀತಿ ಹೆಚ್ಚು ಕಾರ್ಯಕ್ರಮಗಳು ಹಾಗೂ ಕ್ಷೇತ್ರದ ಜನರಿಗಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ತಿಳಿಸಿದು, ಚುನಾವಣೆ ಸಮೀಪಿಸುತ್ತಿದು ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಿದರೆ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು . ರಸ್ತೆ ಉದ್ದಕ್ಕೂ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಆಕರ್ಷವಾದ ರಂಗೋಲಿಗಳು ಬಿಡಿಸಿದು ,ಬಣ್ಣ ಬಣ್ಣಗಳಿಂದ ಅಲಂಕರಿಸಿದ ರಂಗೋಲಿ ವಿಶೇಷವಾಗಿತ್ತು.
ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ : ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ