ಹಾವೇರಿ: ಅಂಬಿಗರ ಚೌಡಯ್ಯ ಕಟುಸತ್ಯವನ್ನು ನುಡಿಯುವ ಶರಣರು. ಪ್ರಿಯವಾದ ಸತ್ಯ ಮತ್ತು ಸುಳ್ಳುಗಳಿರುವ ವ್ಯಾಖ್ಯಾನಗಳಿವೆ. ಸತ್ಯವೆಂದರೆ ಕಠೋರ. ಅಂಬಿಗರ ಚೌಡಯ್ಯ ಸತ್ಯವನ್ನು ಕಠಿಣ ಶಬ್ಧಗಳಲ್ಲಿ ಹೇಳುವಂತಹವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಭಾನುವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ (ರಿ) ವತಿಯಿಂದ ಸುಕ್ಷೇತ್ರ ನರಸೀಪುರದ ಗುರುಪೀಠದಲ್ಲಿ ಆಯೋಜಿಸಿರುವ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ, ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 903ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ : ರೋಡ್ ಶೋ ನಡೆಸಲಿರುವ ಮೋದಿ
ವಚನಗಳ ರಕ್ಷಣೆಯಲ್ಲಿ ಅಂಬಿಗರ ಚೌಡಯ್ಯ ಮಹತ್ವದ ಪಾತ್ರ
ಅಂಬಿಗರ ಚೌಡಯ್ಯ ಕಟುಸತ್ಯವನ್ನು ನುಡಿಯುವ ಶರಣರು. ಪ್ರಿಯವಾದ ಸತ್ಯ ಮತ್ತು ಸುಳ್ಳುಗಳಿರುವ ವ್ಯಾಖ್ಯಾನಗಳಿವೆ. ಸತ್ಯವೆಂದರೆ ಕಠೋರ. ಅಂಬಿಗರ ಚೌಡಯ್ಯ ಸತ್ಯವನ್ನು ಕಠಿಣ ಶಬ್ಧಗಳಲ್ಲಿ ಹೇಳುವಂತಹವರು. ಬಸವಣ್ಣನವರು ಇವರನ್ನು ನಿಜಶರಣೆರೆಂದು ಕರೆದರು. ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ ಎಂದು ನುಡಿದಿದ್ದರು. ಆಗ ವಚನಗಳ ರಕ್ಷಣೆ ಮುಖ್ಯವಾಗುತ್ತದೆ ಎಂದು ಹೇಳಿದ್ದು ನಿಜವಾಗಿದ್ದದಕ್ಕೆ ಅಂಬಿಗರ ಚೌಡಯ್ಯರನ್ನು ನಿಜಶರಣರೆಂದು ಕರೆದರು. ವಚನಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿರಲು ಏಕೈಕ ಕಾರಣ ಅಂಬಿಗರ ಚೌಡಯ್ಯ. ಒಂದು ಕುಲ ಅಥವಾ ಸಮಾಜದವರು ತಮ್ಮ ಸಂಸ್ಕಾರ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ಇಂತಹ ಶಿವಶರಣರ ಕುಲಕ್ಕೆ ತಾವುಗಳು ಸೇರಿದ್ದೀರಿ.ಅಂಬಿಗರು ಒಂದೇ ಹುಟ್ಟಿನಲ್ಲಿ ದಡ ಪಾರು ಮಾಡಿಸುವ ಶಕ್ತಿಯುಳ್ಳವರು. ಕೇವಲ ದೋಣಿಗಳನ್ನು ನಡೆಸುವುದು ಕಸುಬಲ್ಲ. ಇಡೀ ಮಾನವಕುಲವನ್ನು ದಡ ಸೇರಿಸುವವರೇ ಅಂಬಿಗ ಚೌಡಯ್ಯ. ತಾಯಿಯ ಆಶೀರ್ವಾದದಲ್ಲಿ ಸಾತ್ವಿಕ ಚಿಂತನೆಯಿದೆ. ಇದೇ ನಮ್ಮನ್ನು ಒಳ್ಳೆಯ ಹಾದಿಯಲ್ಲಿ ನಡೆಸುತ್ತಿದೆ.
ಮಠ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು : ಸಿಎಂ ಬೊಮ್ಮಾಯಿ
ಈ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕು. 21ನೇ ಶತಮಾನದಲ್ಲಿ ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿದೆ. ತುಳಿತಕ್ಕೊಳಗಾದ ಸಮಾಜದವರು ಶಿಕ್ಷಣ ಪಡೆದು, ವಿವಿಧ ವೃತ್ತಿಯಲ್ಲಿ ದುಡಿದು ಸ್ವಾಭಿಮಾನದ ಬದುಕನ್ನು ಬದುಕುವಂತಾಗಬೇಕು ಎಂದರು.
ಶೀಘ್ರದಲ್ಲೇ ಗಂಗಾಮತಸ್ತ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ: ಸಿಎಂ ಬೊಮ್ಮಾಯಿ