ಇಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾವೇರಿ ನಗರದಲ್ಲಿ, ಗೋ – ಸೇವಾ ಗತಿವಿಧಿ ಹಾಗೂ ಗೋ- ರಕ್ಷಣ ಸಮಿತಿ ಕಾವೇರಿ ನಗರ, ದ್ವಾರಕ ನಗರ ವತಿಯಿಂದ 3ನೇ ವರ್ಷದ ಗೋ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಂಡುವಾಳು ಸಚ್ಚಿದಾನಂದ ಅವರನ್ನು ಸನ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಅವರು, ಮುಕ್ಕೋಟಿ ದೇವತೆಗಳ ಆವಾಸ ಸ್ಥಾನವಾಗಿರುವ ಪವಿತ್ರ ಗೋ ಮಾತೆಯನ್ನು ಪೂಜಿಸುವುದು, ನಮ್ಮ ಸಂಸ್ಕೃತಿ ಸಂಪ್ರದಾಯದ ಒಂದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಗೌರವಿಸಿದ ಗೋ – ಸೇವಾ ಗತಿವಿಧಿ ಹಾಗೂ ಗೋ- ರಕ್ಷಣ ಸಮಿತಿಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಂ, ರೈತ ನಾಯಕ ಮಧುಚಂದನ್ ಭಾಗಿಯಾಗಿದ್ದರು.
ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1
ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 2