Techno News:
ಎಲ್ಲರಿಗೂ ಕಾರೊಂದು ಕೊಳ್ಳುವ ಕನಸ್ಸು ಕಾಡ್ತಾನೆ ಇರುತ್ತೆ. ಅಂತಹವರಿಗಾಗಿ ಅನೇಕ ಕಾರುಗಳು ತಮ್ಮ ಬಜೆಟ್ ನಲ್ಲೇ ದೊರೆಯುವಂತೆ ಸಿಗುವುದಂತೂ ಖಚಿತ. ಹೌದು ನಿಮಗಾಗಿ ಕೆಲವೊಂದು ಸೆಕೆಂಡ್ ಹ್ಯಾಂಡಲ್ ಕಾರುಗಳು ಕಡಿಮೆ ಬಜೆಟ್ ನಲ್ಲಿ ನಿಮಗೆ ದೊರೆಯಲಿವೆ ಅವುಗಳ ಪಟ್ಟಿ ಇಂತಿವೆ.
ಹುಂಡೈ ಗ್ರಾಂಡ್ ಐ10 ನಿಯೋಸ್:
ದೇಶದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಈ ಗ್ರ್ಯಾಂಡ್ i10 ನಿಯಾಸ್ ಕಡಿಮೆ ತೂಕ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಈ ಕಾರಿನಲ್ಲಿ ಪವರ್ ಸ್ಟೀರಿಂಗ್, ಎಬಿಎಸ್, ಏರ್ ಬ್ಯಾಗ್ ನಂತಹ ಇತರೆ ವೈಶಿಷ್ಟ್ಯಗಳು ಇವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡು ಆಯ್ಕೆಗಳಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಲಭ್ಯವಿದ್ದು, ರೂ.5.43 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.
ಮಾರುತಿ ಸುಜುಕಿ ಆಲ್ಟೊ 800:
ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿಆಲ್ಟೊ 800 ಕಾರು ಉತ್ತಮ ಬೇಡಿಕೆಯನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಆಲ್ಟೊ 800 ಹೊಸ ಕಾರಿನ ಬೆಲೆ ರೂ.4 ಲಕ್ಷಕ್ಕಿಂತ ಕಡಿಮೆ ಇದ್ದು, ಸೆಕೆಂಡ್ ಹ್ಯಾಂಡ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಆಲ್ಟೊ 800 ಚಿಕ್ಕ ಕುಟುಂಬಗಳಿಗೆ ಸೂಕ್ತವಾದ ಹ್ಯಾಚ್‌ಬ್ಯಾಕ್ ಎಂದು ಹೇಳಬಹುದು. ಇದರ ಪೆಟ್ರೋಲ್ ಆವೃತ್ತಿಯು 22 kmpl ಮೈಲೇಜ್ ನೀಡಲಿದ್ದು, CNG ಆವೃತ್ತಿಯು 31.5 kmplವರೆಗೆ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್:
ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರು ಮಾದರಿಗಳಲ್ಲಿ ವ್ಯಾಗನ್ ಆರ್ ಕೂಡ ಮೊದಲ ಸ್ಥಾನದಲ್ಲಿ ಇರುತ್ತದೆ. ಹೆಚ್ಚು ಸ್ಥಳಾವಕಾಶ, ಕೈಗೆಟಕುವ ಬೆಲೆ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಪೆಟ್ರೋಲ್ ಆವೃತ್ತಿಯು ಗರಿಷ್ಠ 23.5 kmpl ಮೈಲೇಜ್ ನೀಡುವ ಸಾಮರ್ಥ ಹೊಂದಿದ್ದು, CNG ಆವೃತ್ತಿಯು ಗರಿಷ್ಠ 34 kmpl ಮೈಲೇಜ್ ನೀಡಲಿದೆ. ಈ ಹೊಸ ಕಾರಿನ ಬೆಲೆ ರೂ.5.47 ಲಕ್ಷದಿಂದ ಆರಂಭವಾಗಲಿದೆ.
ರೆನಾಲ್ಟ್ ಕ್ವಿಡ್:
ಈ ಹ್ಯಾಚ್‌ಬ್ಯಾಕ್ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಂದರೆ ರೂ.4.70 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ರೆನಾಲ್ಟ್ ಕ್ವಿಡ್ 799 ಯಿಂದ 999 ಸಿಸಿ ಎಂಜಿನ್ ಹೊಂದಿದ್ದು, 20.7 ರಿಂದ 22 kmpl (ಪೆಟ್ರೋಲ್) ಮೈಲೇಜ್ ನೀಡಲಿದೆ. ಐದು ಜನರು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಸೆಕೆಂಡ್ ಹ್ಯಾಂಡ್ ನಲ್ಲಿ ಈ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಿದರೆ ಮತ್ತಷ್ಟು ಕಡಿಮೆ ಬೆಲೆಗೆ ದೊರೆಯಲಿದೆ.
ಒಟ್ಟಾರೆ ನಿಮ್ಮ ಕನಸಿನ ಕಾರನ್ನು ಕೊಳ್ಳಲು ಇದು ಉಪಯುಕ್ತ ಮಾಹಿತಿ ಎಂಬುವುದು ನಮ್ಮ ಅಭಿಪ್ರಾಯ.
ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!