Gujarath news:
ಗುಜರಾತ್ ನಲ್ಲಿ ವಿಶೇಷ ಪ್ರಕರಣವೊಂದು ಕಂಡು ಬಂದಿದೆ. ಪ್ರೇಮಿಗಳ ಪ್ರತಿಮೆಗೆ ವಿವಾಹ ಮಾಡಿಸಿದ್ದಾರೆ ಕುಟುಂಬಸ್ಥರು. ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಕಡಿಮೆಯೇ ಸರಿ. ಅದರಲ್ಲೂ, ಮನೆಯವರನ್ನು ಒಪ್ಪಿಸಿ ವಿವಾಹವಾದವರ ಸಂಖ್ಯೆ ಇನ್ನೂ ಅಪರೂಪ. ಈ ಹಿನ್ನೆಲೆ ಅನೇಕ ಪ್ರೇಮಿಗಳು ತಮ್ಮ ಪ್ರೀತಿ ಫಲಿಸದ ಕಾರಣ, ಮನೆಯವರು ಒಪ್ಪದ ಕಾರಣ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈಗ ಗುಜರಾತ್‌ನಲ್ಲಿ ವಿಚಿತ್ರ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. ಅದೂ, ಆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ. ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ೬ ತಿಂಗಳ ಬಳಿಕ ಕುಟುಂಬ ಸದಸ್ಯರು ಅವರ ಪ್ರತಿಮೆಗೆ ಮದುವೆ ಮಾಡಿಸಿದ್ದಾರೆ.
ಕುಟುಂಬ ಸದಸ್ಯರು ತಮ್ಮ ಮದುವೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಗಣೇಶ್ ಹಾಗೂ ಆತನ ಪ್ರೇಮಿ ರಂಜನಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಗುಜರಾತ್‌ನ ತಾಪಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರಿಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಘಟನೆಯ ನಂತರ, ತಮ್ಮಿಂದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮನನೊಂದ ಕುಟುಂಬಗಳು ಈ ರೀತಿ ಪ್ರತಿಮೆಗಳನ್ನು ಮಾಡಿ ಅದಕ್ಕೆ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಯಾತ್ರೆಗೆ ಹೈ ಅಲರ್ಟ್: ಜಮ್ಮು ಸ್ಫೋಟದಲ್ಲಿ 6 ಮಂದಿಗೆ ಗಾಯ