State News:
ಕರಾವಳಿ ಹಿಂದುತ್ವದ ಲ್ಯಾಬೋರೇಟರಿ. ಬಿಜೆಪಿಯವರ ಕೆಲಸವೇ ಸುಳ್ಳು ಹರಡುವುದು. ಹಿಂದುತ್ವದ ಹೆಸರಿನಲ್ಲಿ ಸುಳ್ಳು ಹೇಳುವುದು, ಮನುವಾದ ಮಾಡುವವರು ನಮಗೆ ಆಗಿ ಬರುವುದಿಲ್ಲ. ನಾವು ಮನುಷ್ಯರನ್ನು ಪ್ರೀತಿಸುತ್ತೇವೆ. ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರೂ ಮನುಷ್ಯರೇ ಎಂದ ಅವರು, ಭಯೋತ್ಪಾದನೆ ಕೃತ್ಯಗಳನ್ನು ನಾವು ಯಾವಾಗಲೂ ಖಂಡಿಸುತ್ತೇವೆ. ಅಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅಭಿವೃದ್ದಿ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ. ಆ ಪಕ್ಷದವರಿಗೆ ಅಭಿವೃದ್ದಿಯಲ್ಲಿ ನಂಬಿಕೆಯಾಗಲೀ, ಆಸಕ್ತಿಯಾಗಲೀ ಇಲ್ಲ. ಹೀಗಾಗಿ ಕರಾವಳಿಯಾಗಲೀ, ರಾಜ್ಯ, ದೇಶವಾಗಲೀ ಅಭಿವೃದ್ದಿ ಮಾಡುವುದು ಅವರಿಂದ ಅಸಾಧ್ಯ. ಸ್ವಲ್ಪ ದಿನ ಮೆರೆದ ಹಿಟ್ಲರ್ ಕತೆ ಏನಾಯಿತು, ಮುಸಲೋನಿ, ಫ್ರ‍್ಯಾಂಕೋ ಏನಾದರು? ಎಲ್ಲದಕ್ಕೂ ಸಮಯ ಎಂಬುದಿರುತ್ತದೆ. ಜನ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಹರಿಹಾಯ್ದರು.
“ಗಣರಾಜ್ಯೋತ್ಸವ ಆಚರಣೆ ಈದ್ಗಾ ಮೈದಾನಮದಲ್ಲಿ ಮಾಡೇ ಮಾಡ್ತೀವಿ”: ನಾಗರಿಕರ ಒಕ್ಕೂಟ