Saturday, December 21, 2024

Latest Posts

ಸಿಬಿಐಗೆ ಫೋನ್ ಕದ್ದಾಲಿಕೆ, ಕುಮಾರಸ್ವಾಮಿಗೆ ಸಂಕಷ್ಟದ ಕುಣಿಕೆ..!

- Advertisement -

ಬೆಂಗಳೂರು : ರಾಜ್ಯರಾಜ್ಯಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬೈಗೆ ವಹಿಸಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.. ಈ ಮೂಲಕ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಸಂಕಷ್ಟ ದುರಾಗಿದೆ. ದೋಸ್ತಿ ಸರ್ಕಾರವನ್ನ ಳಿಸಿಕೊಳ್ಳುವ ಸಲುವಾಗಿ ಬಿಜೆಪಿ ನಾಯಕರು ಹಾಗೂ ಅತೃಪ್ತ ಶಾಸಕರ ಫೋನ್ ಕದ್ದಾಲಿಕೆ ಮಾಡಲಾಗಿತ್ತು ಅನ್ನೋ ಗಂಭೀರ ರೋಪ ಕೇಳಿ ಬಂದಿದ್ದು. ಇದು ಕಾಂಗ್ರೆಸ್ ನಲ್ಲೇ ಕಲಹಕ್ಕೂ ಕಾರಣವಾಗಿತ್ತು.

ನಾಯಕರ ಖಾಸಗಿ ಮಾತು ಲೀಕ್ ಮಾಡಿತ್ತಾ ಕುಮಾರಸ್ವಾಮಿ ಟೀಂ..?

ಅನರ್ಹ ಶಾಸಕರು ಹಾಗೂ ಬಿಜೆಪಿ ನಾಯಕರ ಖಾಸಗಿ ಮಾತುಕತೆಯನ್ನ ಬಹಿರಂಗಗೊಳಿಸಿ ದೋಸ್ತಿ ಸರ್ಕಾರ ಸೇಫ್ ಮಾಡಿಕೊಳ್ಳಲು ಮುಂದಾಗಿದ್ರು ಎನ್ನುವ ಆರೋಪ ಸಹ ಕೇಳಿಬಂದಿತ್ತು.. ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಕುಮಾರಸ್ವಾಮಿ ವಿರುದ್ಧ  ಈ ಸಂಬಂಧ ಬಹಿರಂತ ವಾಗ್ದಾಳಿ ಸಹ ನಡೆಸಿದ್ರು.. ಇದೀಗ ಸಿಬಿಐ ತನಿಖೆಯಲ್ಲಿ ಕುಮಾರಸ್ವಾಮಿ ಟೀಂ ವಿರುದ್ಧದ ಆರೋಪ ಸಾಬೀತಾದ್ರೆ ರಾಜ್ಯ ರಾಜಕೀಯ ಮತ್ತೊಂದು ಹಂತವನ್ನ ತಲುಪಲಿದೆ..

- Advertisement -

Latest Posts

Don't Miss