Monday, December 23, 2024

Latest Posts

ಕರ್ನಾಟಕ ಟಿವಿ ಜನವರಿ ಸರ್ವೇ. ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ..? ಯಾರಿಗೆ ಹಿನ್ನಡೆ.?

- Advertisement -

Karnataka tv megha survey:

ಬೆಂಗಳೂರು :

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಾರ್ಚ್ ಮೊದಲ ವಾರದಲ್ಲೇ ಚುನಾವಣೆ ಘೋಷಣೆ ಆಗಬಹುದು. ಈ ನಡುವೆ, ಕರ್ನಾಟಕದ ನಂಬರ್ ಒನ್ ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಜನವರಿ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು, ಆಯಾ ತಿಂಗಳ ಟ್ರೆಂಡ್ ಕೊಡ್ತಿರೋ ಕರ್ನಾಟಕ ಟಿವಿ, ಜನವರಿಯಲ್ಲೂ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.

ಸದ್ಯ ರಾಜ್ಯದಲ್ಲಿ ಈಗಲೂ ಅತಂತ್ರ ಫಲಿತಾಂಶ ಬರಲಿದೆ ಅನ್ನೋದು ಕರ್ನಾಟಕ ಟಿವಿಯ ಜನವರಿ ಟ್ರೆಂಡ್. ಈ ಕ್ಷಣಕ್ಕೆ ಜೆಡಿಎಸ್ ಪಕ್ಷ ಮಾತ್ರ 93 ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡಿದೆ. ಹೀಗಾಗಿ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿರೋ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಇನ್ನೂ ಅಭ್ಯರ್ಥಿಗಳ ಗೊಂದಲ ಇದೆ. ಕರ್ನಾಟಕ ಟಿವಿಯ ಜನವರಿ ಸರ್ವೇ ಪ್ರಕಾರ, 224 ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 79, ಜೆಡಿಎಸ್ 41, ಆಮ್ ಆದ್ಮಿ ಪಕ್ಷ 2, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1, ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ಕರ್ನಾಟಕ ಟಿವಿ ಜನವರಿ ಟ್ರೆಂಡ್

ಪಕ್ಷ

ಬಿಜೆಪಿ – 99
ಕಾಂಗ್ರೆಸ್ – 79
ಜೆಡಿಎಸ್ – 41
ಆಪ್​ – 02
ಕೆಆರ್​​ ಪಿಪಿ – 01
ಪಕ್ಷೇತರ – 02

ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ.? ಯಾರಿಗೆ ಹಿನ್ನಡೆ.?

ದಾವಣಗೆರೆ 7 ಕ್ಷೇತ್ರ

ಜಗಳೂರು : ಬಿಜೆಪಿ ಮುನ್ನಡೆ
ಹರಿಹರ : ಕಾಂಗ್ರೆಸ್ ಮುನ್ನಡೆ
ದಾವಣಗೆರೆ ಉತ್ತರ : ಬಿಜೆಪಿ ಮುನ್ನಡೆ
ದಾವಣಗೆರೆ ದಕ್ಷಿಣ : ಕಾಂಗ್ರೆಸ್ ಮುನ್ನಡೆ
ಮಾಯಕೊಂಡ : ಬಿಜೆಪಿ ಮುನ್ನಡೆ
ಚನ್ನಗಿರಿ : ಬಿಜೆಪಿ ಮುನ್ನಡೆ
ಹೊನ್ನಾಳಿ : ಬಿಜೆಪಿ ಮುನ್ನಡೆ

ದಾವಣಗೆರೆ (07)
ಬಿಜೆಪಿ – 05
ಕಾಂಗ್ರೆಸ್ – 02

ಮಧ್ಯ ಕರ್ನಾಟಕ ಯಾವ ಪಕ್ಷಕ್ಕೆ ಎಷ್ಟು ಸೀಟು.?

ಮಧ್ಯ ಕರ್ನಾಟಕ (25)
ಕರ್ನಾಟಕ ಟಿವಿ ಜನವರಿ ಟ್ರೆಂಡ್

ಮಧ್ಯ ಕರ್ನಾಟಕಕ್ಕೆ 4 ಜಿಲ್ಲೆ ಸೇರುತ್ವೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ. 4 ಜಿಲ್ಲೆಗಳಿಂದ ಒಟ್ಟು 25 ಕ್ಷೇತ್ರ ಇವೆ. ಸದ್ಯ ಕರ್ನಾಟಕ ಟಿವಿಯ ಜನವರಿ ಟ್ರೆಂಡ್​​ ನಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಹೆಚ್ಚಿನ ಒಲವು ಕಂಡು ಬರ್ತಿದೆ. ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ 15 ಸ್ಥಾನ, ಕಾಂಗ್ರೆಸ್ 7, ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಧ್ಯ ಕರ್ನಾಟಕ (25)
ಕರ್ನಾಟಕ ಟಿವಿ ಜನವರಿ ಟ್ರೆಂಡ್

ಬಿಜೆಪಿ – 15
ಕಾಂಗ್ರೆಸ್ – 07
ಜೆಡಿಎಸ್ – 03

ಮಧ್ಯ ಕರ್ನಾಟಕದ 4 ಜಿಲ್ಲೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಅನ್ನೋದನ್ನ ನೋಡೋದಾದ್ರೆ..

ಮಧ್ಯ ಕರ್ನಾಟಕ (25)
ಜಿಲ್ಲೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್​ ಇತರೆ
ಚಿತ್ರದುರ್ಗ (06) – 02 03 01 00
ದಾವಣಗೆರೆ (07) – 05 02 00 00
ಶಿವಮೊಗ್ಗ (07) – 03 02 02 00
ಚಿಕ್ಕಮಗಳೂರು (05) – 05 00 00 00

ಮಧ್ಯ ಕರ್ನಾಟಕ ಜೊತೆಗೆ ಮಲೆನಾಡು ಭಾಗ ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ಬಿಜೆಪಿ ಪರ ಅಲೆ ಇದ್ದು, ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸ್ತಿದೆ. ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆದ್ಮೇಲೆ, ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಕರ್ನಾಟಕ ಟಿವಿ ಮತ್ತೆ ಫೆಬ್ರವರಿಗೂ ಟ್ರೆಂಡ್ ನೀಡಲಿದೆ. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟ ಮಾಡಲಿದೆ. ಹೀಗಾಗಿ, ಫೆಬ್ರವರಿ ಟ್ರೆಂಡ್ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

ಕರ್ನಾಟಕ ಟಿವಿ, ಬೆಂಗಳೂರು..

ಕರ್ನಾಟಕ ಟಿವಿ ಜನವರಿ ಸರ್ವೇ. ಹಳೇ ಮೈಸೂರು ಕರ್ನಾಟಕದ 61 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

ಕರ್ನಾಟಕ ಟಿವಿ ಜನವರಿ ಸರ್ವೇ. ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

Latest Posts

Don't Miss