Saturday, July 27, 2024

Latest Posts

ಕರ್ನಾಟಕ ಟಿವಿ ಜನವರಿ ಸರ್ವೇ. ಹಳೇ ಮೈಸೂರು ಕರ್ನಾಟಕದ 61 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

karnataka tv Megha survey:

ಬೆಂಗಳೂರು :

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಾರ್ಚ್ ಮೊದಲ ವಾರದಲ್ಲೇ ಚುನಾವಣೆ ಘೋಷಣೆ ಆಗಬಹುದು. ಈ ನಡುವೆ, ಕರ್ನಾಟಕದ ನಂಬರ್ ಒನ್ ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಜನವರಿ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು, ಆಯಾ ತಿಂಗಳ ಟ್ರೆಂಡ್ ಕೊಡ್ತಿರೋ ಕರ್ನಾಟಕ ಟಿವಿ, ಜನವರಿಯಲ್ಲೂ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.

ಸದ್ಯ ರಾಜ್ಯದಲ್ಲಿ ಈಗಲೂ ಅತಂತ್ರ ಫಲಿತಾಂಶ ಬರಲಿದೆ ಅನ್ನೋದು ಕರ್ನಾಟಕ ಟಿವಿಯ ಜನವರಿ ಟ್ರೆಂಡ್. ಈ ಕ್ಷಣಕ್ಕೆ ಜೆಡಿಎಸ್ ಪಕ್ಷ ಮಾತ್ರ 93 ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡಿದೆ. ಹೀಗಾಗಿ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿರೋ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಇನ್ನೂ ಅಭ್ಯರ್ಥಿಗಳ ಗೊಂದಲ ಇದೆ. ಕರ್ನಾಟಕ ಟಿವಿಯ ಜನವರಿ ಸರ್ವೇ ಪ್ರಕಾರ, 224 ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 79, ಜೆಡಿಎಸ್ 41, ಆಮ್ ಆದ್ಮಿ ಪಕ್ಷ 2, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1, ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ.

ಕರ್ನಾಟಕ ಟಿವಿ ಜನವರಿ ಟ್ರೆಂಡ್

ಪಕ್ಷ

ಬಿಜೆಪಿ – 99
ಕಾಂಗ್ರೆಸ್ – 79
ಜೆಡಿಎಸ್ – 41
ಆಪ್​ – 02
ಕೆಆರ್​​ ಪಿಪಿ – 01
ಪಕ್ಷೇತರ – 02

ಹಳೇ ಮೈಸೂರು ಕರ್ನಾಟಕದ 61 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

ಕರ್ನಾಟಕದಲ್ಲಿ ಅತೀ ಹೆಚ್ಚು ಕ್ಷೇತ್ರ ಹಾಗೂ ನಿರ್ಣಯಕ ಅಂದ್ರೆ ಅದು ಹಳೇ ಮೈಸೂರು ಭಾಗ. ಬೆಂಗಳೂರು ಹೊರತುಪಡಿಸಿ, 10 ಜಿಲ್ಲೆಗಳು ಹಳೇ ಮೈಸೂರು ಭಾಗಕ್ಕೆ ಬರುತ್ವೆ. ಇದರಲ್ಲಿ 61 ವಿಧಾನಸಭಾ ಕ್ಷೇತ್ರಗಳಿವೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳು ಹಳೇ ಮೈಸೂರು ವ್ಯಾಪ್ತಿಗೆ ಬರುತ್ವೆ. 61 ಕ್ಷೇತ್ರಗಳ ಪೈಕಿ ಕರ್ನಾಟಕ ಟಿವಿ ಜನವರಿ ಟ್ರೆಂಡ್​ ಪ್ರಕಾರ ಜೆಡಿಎಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಚರತ್ನ ಯಾತ್ರೆ ಒಂದ್ ಕಡೆಯಾದ್ರೆ, ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡಿರೋದು ಜೆಡಿಎಸ್​ ಗೆ ಪ್ಲಸ್ ಆಗಿದೆ. 61 ಕ್ಷೇತ್ರಗಳ ಪೈಕಿ ಜೆಡಿಎಸ್ 30, ಕಾಂಗ್ರೆಸ್ 15, ಬಿಜೆಪಿ 14, ಇಬ್ಬರು ಪಕ್ಷೇತರರು ಮುನ್ನಡೆಯನ್ನ ಪಡೆದುಕೊಂಡಿದ್ದಾರೆ.

ಹಳೇ ಮೈಸೂರು ಕರ್ನಾಟಕ (61)
ಕರ್ನಾಟಕ ಟಿವಿ ಜನವರಿ ಟ್ರೆಂಡ್

ಬಿಜೆಪಿ – 14
ಕಾಂಗ್ರೆಸ್ – 15
ಜೆಡಿಎಸ್ – 30
ಇತರೆ – 02

ಹಳೇ ಮೈಸೂರು ಭಾಗದ 10 ಜಿಲ್ಲೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟ್ ಅನ್ನೋದನ್ನ ನೋಡೋದಾದ್ರೆ..

ಹಳೇ ಮೈಸೂರು ಭಾಗ (61)

ಜಿಲ್ಲೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ

ತುಮಕೂರು (11) – 03 01 07 00
ಚಿಕ್ಕಬಳ್ಳಾಪುರ (5) – 01 00 02 02
ಕೋಲಾರ (6) – 01 02 03 00
ಬೆಂಗಳೂರು ಗ್ರಾ (4) – 02 00 02 00
ರಾಮನಗರ (4) – 00 01 03 00
ಮಂಡ್ಯ (7) – 00 03 04 00
ಹಾಸನ (7) – 02 01 04 00
ಮೈಸೂರು (11) – 02 05 04 00
ಮಡಿಕೇರಿ (2) – 02 00 00 00
ಚಾಮರಾಜನಗರ (4) – 01 02 01 00

ಹಳೇ ಮೈಸೂರು ಭಾಗ ಮೂರೂ ಪಕ್ಷಗಳಿಗೂ ತುಂಬಾ ಪ್ರಮುಖ. ಇಲ್ಲಿ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಫೈಟ್ ಇದ್ರೂ, ಬಿಜೆಪಿ ಹೇಗಾದ್ರೂ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಪ್ಲಾನ್ ಮಾಡಿದೆ. ಹೀಗಾಗಿನೇ ಅಮಿತ್ ಶಾ ಸೇರಿದಂತೆ ಸಾಕಷ್ಟು ಹೈಕಮಾಂಡ್ ನಾಯಕರ ಟಾರ್ಗೆಟ್ ಹಳೇ ಮೈಸೂರು ಭಾಗವೇ ಆಗಿದೆ. ಸದ್ಯ ಜೆಡಿಎಸ್ ಪಟ್ಟಿ ಬಹುತೇಕ ಹಳೇ ಮೈಸೂರು ಭಾಗದಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆದ್ಮೇಲೆ, ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಕರ್ನಾಟಕ ಟಿವಿ ಮತ್ತೆ ಫೆಬ್ರವರಿಗೂ ಟ್ರೆಂಡ್ ನೀಡಲಿದೆ. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟ ಮಾಡಲಿದೆ. ಹೀಗಾಗಿ, ಫೆಬ್ರವರಿ ಟ್ರೆಂಡ್ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

ಕರ್ನಾಟಕ ಟಿವಿ, ಬೆಂಗಳೂರು..

ಕರ್ನಾಟಕ ಟಿವಿ ಜನವರಿ ಸರ್ವೇ. ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

ಕರ್ನಾಟಕ ಟಿವಿ ಜನವರಿ ಸರ್ವೇ. ಮಧ್ಯ ಕರ್ನಾಟಕದ 25 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ.?

- Advertisement -

Latest Posts

Don't Miss