- Advertisement -
ಸಂಪುಟದಲ್ಲಿ ಸ್ಥಾನ ಸಿಗದೆ ಉಗ್ರರೂಪ ತಾಳಿರುವ ಉಮೇಶ್ ಕತ್ತಿ ಸಂಫುಟಕ್ಕೆ ಸೇರಿಸಿಕೊಳ್ಳಲು ಹೋಗಿ ಸಿಎಂ ಯಡಿಯೂರಪ್ಪ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉಮೇಶ್ ಕತ್ತಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಡುವಂತೆ ಅಮಿತ್ ಶಾ ಬಳಿ ಅನುಮತಿಗಾಗಿ ಬಿಎಸ್ ವೈ ತೆರಳಿದ್ರು. ಉಮೇಶ್ ಕತ್ತಿ ಸಂಫುಟ ಸೇರ್ಪಡೆ ಜೊತೆ ನಾವು ಸೂಚಿಸಿದವರಿಗೆ ಡಿಸಿಎಂ ಪಟ್ಟ ನೀಡುವಂತೆ ಅಮಿತ್ ಶಾ ಆಜ್ಞೆ ಮಾಡಿದ್ದಾರೆ..
ಕತ್ತಿ ಸೇರ್ಪಡೆಗೆ ಒತ್ತಾಡ ಹಾಕಲು ಬಂದ ಬಿಎಸ್ ವೈ ಇದೀಗ ಡಿಸಿಎಂ ನೇಮಕ ಮಾಡಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.. ಮೂಲಗಳ ಪ್ರಕಾರ ಮಲ್ಲೇಶ್ವರಂ ಬಿಜೆಪಿ ಶಾಸಕ ನೂತನ ಸಚಿವರಾಗಿರುವ ಡಾ ಅಶ್ವಥ್ ನಾರಾಯಣ್, ಕೆ.ಎಸ್ ಈಶ್ವರಪ್ಪ ಶ್ರೀರಾಮುಲು, ಹಾಗೂ ಗೋವಿಂದ ಕಾರಜೋಳ ಸೇರಿದಂತೆ ಲಿಂಗಾಯತ ಸಮುದಾಯದಿಂದ ಯಾರಾದ್ರೂ ಒಬ್ಬರನ್ನ ಡಿಸಿಎಂ ಮಾಡುವಂತೆ ಅಮಿತ್ ಶಾ ಬಿಎಸ್ ವೈ ಸೂಚಿಸಿದ್ದಾರೆ..
- Advertisement -