- Advertisement -
ಕರ್ನಾಟಕ ಟಿವಿ : ಕಾಫಿ ಡೇ ಸಿದ್ಧಾರ್ಥ ಕುಟುಂಬಕ್ಕೆ ಮತ್ತೊಂದು ಆಘಾತದ ಸುದ್ದಿ. ಕಳೆದ ತಿಂಗಳಷ್ಟೇ ಸಿದ್ದಾರ್ಥ ಆತ್ಮಹತ್ಯೆಗೆ ಶರಣಾಗಿದ್ರು. ಇಂದು ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ (96) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳೀನಿಂದ ಚಿಕಿತ್ಸೆ ಪಡೆಯುತ್ತಿದ್ದ ಗಂಗಯ್ಯ ಹೆಗ್ಡೆ ಸಿದ್ದಾರ್ಥ ಸಾವಿನ ಸಂದರ್ಭದಲ್ಲಿ ಕೋಮಾಗೆ ಜಾರಿದ್ರು. ಮಗನ ಸಾವಿನ ಸುದ್ದಿಯೂ ಗಂಗಯ್ಯ ಹೆಗ್ಡೆಗೆ ತಿಳಿದಿರಲಿಲ್ಲ.. ಇದೀಗ ಮಗ ಸಿದ್ದಾರ್ಥನ ಹಾದಿಯಲ್ಲೇ ಗಂಗಯ್ಯ ಹೆಗ್ಡೆ ಸಾವಿನ ಮನೆ ಸೇರಿದ್ದಾರೆ.
ಇನ್ನು ಗಂಗಯ್ಯ ಹೆಗ್ಡೆಯವರ ಪಾರ್ಥಿವ ಶರೀರವನ್ನ ಚಿಕ್ಕಮಗಳೂರಿನ ಚೇತನ ಎಸ್ಟೇಟ್ ನಲ್ಲಿ ನಾಳೆವ ನಡೆಯಲಿದೆ.. ಪುತ್ರ ಸಾವನ್ನಪ್ಪಿ ಒಂದು ತಿಂಗಳ ಒಳಗಾಗಿ ತಂದೆಯೂ ಮಗನನ್ನ ಹಿಂಬಾಲಿಸಿದ್ದು ನೋವಿನ ಸಂಗತಿಯೇ ಸರಿ.
- Advertisement -