ಕರ್ನಾಟಕ ಟಿವಿ : ಕಳೆದ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿ ನಾನೇ ಬಿಜೆಪಿಯ ಒಕ್ಕಲಿಗರ ನಾಯಕ. ಯಡಿಯೂರಪ್ಪ ನಂತರ ಸಿಎಂ ಸೀಟ್ ಗೆ ಟವಲ್ ಹಾಸಲು ಕಾಯ್ತಿದ್ದ ಆರ್. ಅಶೋಕ್ ಗೆ ಬಿಜೆಪಿ ಹೈಕಮಾಂಡ್ ಸಖತ್ ಶಾಕ್ ನೀಡಿದೆ. ಹಾಗೆ ನೋಡಿದ್ರೆ ಜಾತಿವಾರು ಡಿಸಿಎಂ ಸ್ಥಾನ ನೀಡೋದಾದ್ರೆ ಒಕ್ಕಲಿಗ ಕೋಟಾದಡಿ ಆರ್. ಅಶೋಕ್ ಮೊದಲ ಆದ್ಯತೆ ಅಂತ ಎಲ್ರೂ ಅಂದು ಕೊಂಡಿದ್ರು. ಮಿಸ್ ಆದ್ರೆ ಸಿ.ಟಿ ರವಿ ಒಕ್ಕಲಿಗ ಕೋಟಾದಡಿ ಡಿಸಿಎಂ ಆಗಬಹುದು ಅನ್ನುವ ಲೆಕ್ಕಾಚಾರವಿತ್ತು. ಆದ್ರೆ ಮಲ್ಲೇಶ್ವರ ಶಾಸಕ ಅಶ್ವಥ್ ನಾರಾಯಣ್ ಡಿಸಿಎಂ ಮಾಡುವ ಮೂಲಕ ನಾವೇ ಬಿಜೆಪಿಯ ಪ್ರಶ್ನಾತೀತ ನಾಯಕರು ಅಂತ ಬೀಗ್ತಿದ್ದ ಆರ್. ಅಶೋಕ್ ಹಾಗೂ ಸಿ.ಟಿ ರವಿಗೆ ಹಿನ್ನಡೆ ಉಂಟಾಗಿದೆ.
ಅಶ್ವಥ್ ನಾರಾಯಣ್ ಮಾಡಿದ್ದಕ್ಕೆ ಅಶೋಕ್ ಸಿಟ್ಟು
ಬೆಂಗಳೂರಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವನು ನಾನು. ಅಶ್ವಥ್ ನಾರಾಯಣ್ ಮಲ್ಲೇಶ್ವರ ಬಿಟ್ಟು ಹೊರಗಡೆ ಬಂದಿಲ್ಲ ಹೀಗಿರುವಾಗ ಅದ್ಯಾವ ಲೆಕ್ಕದಲ್ಲಿ ಡಿಸಿಎಂ ಸ್ಥಾನ ಕೊಟ್ರು. ನಾನ್ಯಾಕೆ ಅವನ ಕೈ ಕೆಳಗೆ ಕೆಲಸ ಮಾಡ್ಬೇಕು ಅಂತ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಈಗ ಏನೇ ಅಸಮಾಧಾನ ವ್ಯಕ್ತಪಡಿಸಿದ್ರು ಹೀಗಾಗಲೇ ಅಶ್ವಥ್ ನಾರಾಯಣ್ ಡಿಸಿಎಂ ಆಗಿಯಾಗಿದೆ. ಇನ್ನೇನೆ ಭಿನ್ನಮತ ವ್ಯಕ್ತಪಡಿಸಿದ್ರು ವೇಸ್ಟ್.