Hassan News:
ಪ್ಲೀಸ್ ಕಣೇ ಒಂದೇ ಒಂದು ಚಾನ್ಸ್ ಕೊಡೇ ಆತ ಆಕೆಯ ಬಳಿ ಅಂಗಳಾಚಿ ಬೇಡಿಕೊಂಡಿದ್ದ ನೀನಿಲ್ಲಾಂದ್ರೆ ನಾ ಸತ್ತೇ ಹೋಗ್ತೀನಿ ಅಂತ ಕಣ್ನೀರು ಹಾಕುತ್ತಾ ಕೇಳಿಕೊಂಡಿದ್ದ. ನಾನಿಲ್ಲಿದ್ದೀನಿ ಬಾ ಅಂತ ಆಕೆ ಹೇಳಿದ್ದೇ ತಡ ಅವಳನ್ನು ನೋಡೋ ಒಂದು ಆಸೆಯಿಂದ ಆತ ಊರು ಬಿಟ್ಟು ಚನ್ನೈ ಗೂ ಹಾರಿದ್ದ ಆದರೆ ಆ ಮೋಸದ ಪ್ರೀತಿಗೆ ಆತನ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು. ಹುಡುಗಿಯನ್ನು ನೋಡಿಕೊಂಡು ಬರುತ್ತೇನೆ ಎಂದಾತ ವಾಪಸ್ಸಾಗಿದ್ದು ಮಾತ್ರ ಶವವಾಗಿ. ಇನ್ನೇನು ನನ್ನ ಹುಡುಗಿ ಸಿಕ್ಕೇ ಬಿಟ್ಟಳು ಅಂತ ಕಾತುರದಿಂದಿದ್ದ ಪ್ರೇಮಿ ಅತಿಯಾದ ಪ್ರೀತಿಯೇ ಉರುಳಾಯಿತು.
ನನ್ನ ಹುಡುಗಿ ಕರೆದಿದ್ದಾಳೆ ನಾ ಹೊರ ರಾಜ್ಯಕ್ಕೆ ಹೋಗಿ ಬರ್ತೇನೆ ನನ್ನಾಕೆ ಅಲ್ಲಿದ್ದಾಳೆ ನಾ ನೋಡಿಕೊಂಡು ಬರ್ತೇನೆ ಎಂದು ಆತ ಮನೆಯಿಂದ ಹೊರ ನಡೆದಿದ್ದ. ಇನ್ನೇನು ಮದುವೆಯಾಗೋರಲ್ವ ಹೋಗಿ ಮಾತಾಡಿಕೊಂಡು ಬರಲಿ ಬಿಡಿ ಎಂದು ಮನೆಯವರೂ ಸಮ್ಮತಿ ಕೂಡಾ ನೀಡಿದ್ರು ಆದ್ರೆ ಆತ ವಪಾಸ್ಸು ಬಂದ ರೀತಿ ಮಾತ್ರ ಮನೆಯೇ ಇಂದು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಅದೊಂದು ಕರೆ ಮನೆಯವರಿಗೆ ಶಾಕ್ ನೀಡಿತ್ತು. ಚೆನ್ನೈ ನಿಂದ ಮನೆಯವರಿಗೊಂದು ಕರೆ ಬರುತ್ತೆ ನಿಮ್ಮ ಮನೆ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಬಂದು ಫಾರ್ಮಾಲಿಟಿಸ್ ಮುಗಿಸಿ ಶವವನ್ನು ತೆಗೆದುಕೊಂಡು ಹೋಗಿ ಎಂದು ಪೊಲೀಸ್ ಮಾಹಿತಿ ನೀಡಿದ್ರು. ಆ ಮಾತು ಕೇಳುತ್ತಲೇ ಮನೆಯವರೆಲ್ಲಾ ದಂಗು ಬಡಿದಂತಾಗಿ ಒಂದು ಕ್ಷಣ ನಿಶಬ್ಧರಾಗುತ್ತಾರೆ. ಇಡೀ ಊರೇ ಸ್ಮಶಾನ ಮೌನವಾಗುತ್ತೆ.
ಹೌದು ಈ ಆತ್ಮಹತ್ಯೆಯ ಹಿಂದೆ ಒಂದು ರೋಚಕ ಪ್ರೇಮ್ ಕಹಾನಿ ಇದೆ ಹೇಳ್ತೀವಿ ಕೇಳಿ.ಅಂದಹಾಗೆ ಇದು ಬೇರೆ ಎಲ್ಲೂ ನಡೆದ ಘಟನೆ ಅಲ್ಲ ಪಕ್ಕದ ಹಾಸನ ಜಿಲ್ಲೆಯಲ್ಲಿನ ಮೋಸದ ಲವ್ ಸ್ಟೋರಿ. ಅವರದ್ದು 3 ವರ್ಷಗಳ ಪ್ರೀತಿ ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ ಎಂಬ ಯುವಕ ಅದೇ ಊರಿನ ಹೊಳೆನರಸೀಪುರದ ಯುವತಿಯನ್ನು ಪ್ರೀತಿಸುತ್ತಿದ್ದ. ಅವರ ವಿಚಾರ ಮನೆಯಲ್ಲಿಯೂ ತಿಳಿದಿತ್ತು. ಇದರಿಂದ ಮನೆಯವರೂ ಇಬ್ಬ ರಿಗೂ ವಿರೋಧವನ್ನು ಮಾಡಿರ್ಲಿಲ್ಲ. ಯುವಕ ಪ್ರತಿಷ್ಟಿತ ಹೋಟೆಲ್ ನಲ್ಲಿ ರಿಸಪ್ಶನಿಸ್ಟ್ ಕೆಲಸ ಮಾಡ್ತಾ ಇದ್ದ ಯುವತಿಯೂ ಪಕ್ಕದ ಊರಿನಲ್ಲೇ ಕೆಲಸ ಮಾಡ್ತಾ ಇದ್ಳು ಹೀಗಾಗಿ ಅವರ ಪ್ರೀತಿ ಸಮೀಪದಿಂದಲೇ ಮತ್ತಷ್ಟು ಬಲವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಗೊತ್ತಿಲ್ಲ ಅವಳಿಗೆ ಮಾತ್ರ ಅದ್ಯಾಕೋ ಆತ ಬೋರಾಗೋಕೆ ಶುರುವಾಗಿದ್ನೋ ಏನು ನಿರಂತರವಾಗಿ ಆತನನ್ನು ಇಗ್ನೋರ್ ಮಾಡೋದಕ್ಕೆ ಶುರು ಮಾಡ್ತಾಳೆ. ಅವನ ಕರೆಗೂ ಉತ್ತರವಿಲ್ಲ ಮೆಸೇಜ್ ಗೂ ರಿಪ್ಲೈ ಇರಲಿಲ್ಲ. ಆತ ಮಾತ್ರ ನಿನ್ನನ್ನು ಬಿಟ್ಟಿರೋಕೆ ಆಗಲ್ಲ ಅಂತ ಅಳೋದಕ್ಕೆ ಶುರು ಮಾಡಿದ್ದ. ನಾನು ನಿನ್ನನ್ನ ಬಿಟ್ಟಿರೋಕೆ ಸಾಧ್ಯ ಇಲ್ಲ ಒಂದೇ ಒಂದು ಚಾನ್ಸ್ ಕೊಡೇ ಪ್ಲೀಸ್ ಕಣೆ ಅಂತ ಅಂಗಳಾಚಿದ್ದ. ಆದರೆ ಆಕೆ ಮಾತ್ರ ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಲ್ವ ಅಂತಾ ಅದ್ಯಾಕೋ ಸ್ವಲ್ಪವೂ ಕರುಣೆ ಇಲ್ಲದಂತೆ ವರ್ತಿಸಿದ್ದಳು.
ಇದಿಷ್ಟೇ ಆಗಿದ್ದರೆ ಈ ಅನಾಹುತ ಆಗುತ್ತಿರಲಿಲ್ಲವೇನೋ ಅದ್ಯಾಕೋ ಅದೇನಾಯ್ತೋ ಗೊತ್ತಿಲ್ಲ ಆಕೆ ಆತನಿಗೆ ಕಾಲ್ ನಾನ್ ಚೆನ್ನೈ ನಲ್ಲಿದ್ದೀನಿ ಬಾ ಎಂದು ಕರೆದಿದ್ದೇ ತಡ ಕಾತುರದಿಂದ ಕಾಯ್ತಿದ್ದ ಪ್ರೇಮಿ ಸಂತೋಷದಿಂದಲೇ ಚೆನ್ನೈ ಗೆ ಹಾರಿದ್ದ ಇನ್ನೇನು ನನ್ನ ಹುಡುಗಿ ನನಗೆ ಸಿಕ್ಕೇ ಬಿಟ್ಟಳು ಅನ್ನುವಷ್ಟ ರಲ್ಲೇ ಆತನಿಗೆ ಶಾಕ್ ಕಾದಿತ್ತು. ಯುವಕ ಚೆನ್ನೈ ಗೆ ತಲುಪಿದ್ದೇ ತಡ ಹುಡುಗಿ ಉಲ್ಟಾ ಹೊಡೆದಿದ್ದಳು. ಹೌದು ಜನವರಿ 27 ರಂದು ತಾನು ಚೆನ್ನೈಲಿದ್ದು ಅಲ್ಲಿಗೇ ಬರುವಂತೆ ಯುವತಿ ಕರೆದಿದ್ದಾಳೆ. ಇನ್ನು ಆಕೆಯ ಮಾತನ್ನು ನಂಬಿಕೊಂಡು ಪ್ರೀತಿಗಾಗಿ ಹಂಬಲಿಸಿದ ಯುವಕ ಕಾರ್ತಿಕ್ ಅಲ್ಲಿ ಇಲ್ಲಿ ಹಣವನ್ನು ಹೊಂದಿಸಿಕೊಂಡು ಚೆನ್ನೈ ನಗರಕ್ಕೆ ಹೋಗಿದ್ದಾನೆ. ಆದರೆ, ಚೆನ್ನೈಗೆ ಹೋದ ಬಳಿಕ ಯುವತಿ ತಾನು ಹಾಸನದಲ್ಲೇ ಇರೋದಾಗಿ ಹೇಳುವ ಮೂಲಕ ಯಾಮಾರಿಸಿದ್ದಾಳೆ. ಇದಿಷ್ಟೇ ಸಾಕಿತ್ತು ಆ ನೊಂದ ಜೀವ ಮತ್ತಷ್ಟು ಕುಗ್ಗಿ ಹೋಗಿತ್ತು.
ನಾನು ನನ್ನ ಹುಡುಗಿ ಜೊತೆ ಕಳೆಯೋದಕ್ಕೆ ಅಂತ ರೂಂ ಬುಕ್ ಮಾಡಿಕೊಂಡಿದ್ದ ಯುವಕ ಅದೇ ರೂಂ ನಲ್ಲಿ ನೇಣಿಗೆ ಶರಣಾಗಿದ್ದ. ಚೆನ್ನೈ ನ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನನ್ನು ಹಾಸನ ನಗರದ ಸಂಗಮೇಶ್ವರ ಬಡಾವಣೆ ಯ ಕಾರ್ತಿಕ್ (26) ಎಂದು ಪೊಲೀಸರು ಪರಿಶೀಲನೆ ಮೂಲಕ ತಿಳಿದುಕೊಂಡರು.
ಹಾಸನನದಿಂದ ಚನ್ನೈಗೆ ಹೋಗಿದ್ದರೂ ಯುವತಿ ತನಗೆ ಸಿಗದೇ ಮೋಸ ಮಾಡಿದ್ದಾಳೆಂದು ಮನನೊಂದು ಅಲ್ಲಿ ತಂಗಲು ರೂಮ್‌ಮಾಡಿದ್ದ ಲಾಡ್ಜ್‌ನಲ್ಲಿಯೇ ಯುವಕ ನೇಣಿಗೆ ಶರಣಾಗಿದ್ದ. ಆಕೆ ಏನೋ ಸುಳ್ಳು ಹೇಳಿದ್ದಳು ಆದರೆ ಅದೇ ಸುಳ್ಳಿಗೆ ಬಲಿಯಾದ ಹುಡುಗನ ಮನೆಯವರ ಪರಿಸ್ಥಿತಿ ಮಾತ್ರ ಹೇಳತೀರದಾಗಿದೆ. ಹುಡುಗನನ್ನು ನಂಬಿಸಿ ಮೋಸಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರ ಆರೋಪ ಕೂಡಾ ಕೇಳಿ ಬರ್ತಿದೆ. ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮನೆಯವರು ಪಟ್ಟು ಹಿಡಿದಿದ್ದಾರೆ. ಅಂಗಳಾಚಿ ಬೇಡಿಕೊಳ್ಳುತ್ತಿದ್ದಾರೆ.
ಅಂತೂ ನಿಜವಾದ ಪ್ರೀತಿಗೆ ಆ ಮನೆ ಮಾತ್ರ ಕಳೆದುಕೊಂಡಿದ್ದು ಬಾಳಿ ಬದುಕಬೇಕಾದ ಮಗನನ್ನು. ಇನ್ನಾದರೂ ಮೋಸ ಮಾಡುವ ಮುನ್ನ ಒಮ್ಮೆ ಯೋಚಿಸಿ ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂವನ್ನೇ ಶೋಕ ಸಾಗರದಲ್ಲಿ ಮುಳುಗಿಸ ಬಹುದು ಹುಷಾರ್…
ಅದೆಂತಹದ್ದೇ ಪ್ರೀತಿ ಇರಲಿ ಆತ ಒಂದು ಕ್ಷಣ ಯೋಚಿಸಬೇಕಿತ್ತು. ಇಲ್ಲ ಮನೆಯವರು ಆತನು ಹೋಗೋದನ್ನಾದರೂ ತಡೆಯಬೇಕಿತ್ತು. ಆ ಹೆಣ್ಣು ಸುಳ್ಳು ಹೇಳುವ ಮುನ್ನ ಯೋಚಿಸ ಬೇಕಿತ್ತು. ಆದರೆ ಈಗ ಕಾಲ ಮೀರಿ ಹೋಗಿದೆ.ಆದ್ರೆ ಇನ್ನು ಮುಂದೆಯಾದರೂ ಪರಿಶುದ್ಧ ಪ್ರೀತಿಗೆ ಮೋಸ ಮಾಡುವ ಮುನ್ನ ಒಮ್ಮೆ ಯೋಚಿಸಿ….
-ನಾಗರಾಜ್ ಕರ್ನಾಟಕ ಟಿವಿ ಹಾಸನ