national news
ವ್ಯಾಟ್ಸಪ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ. ಪ್ರಯಾಣಿಕರು ರೈಲಿನಲ್ಲಿ ದೂರದೂರಿಗೆ ಪ್ರಯಾಣಿಸುವ ವೇಳೆ ಹಸಿವಾಗಿದ್ದರೆ ಇನ್ನು ಮುಂದೆ ಆಹಾರಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ ಯಾಕೆಂದರೆ ಪ್ರಯಾಣಿಕರಿಗಾಗಿಯೇ “ಭಾರತೀಯ ರೈಲ್ವೆ ಕ್ಯಾಂಟರಿAಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್” ತನ್ನ ಇ ಕಾಂಟರಿAಗ್ ಸೇವೆಯನ್ನು ಗ್ರಾಹಕರ ಸ್ನೇಹಿಗೊಳಿಸಲು ವ್ಯಾಟ್ಸಪ್ ಸೇವೆಯನ್ನು ಸದ್ಯದಲ್ಲೆ ಪರಿಚಯಿಸಲಿದೆ. ನೀವು ಕುಳಿತಲ್ಲಿಯೆ ವ್ಯಾಟ್ಯಪ್ ಮೂಲಕ ಒಂದು ಸಂದೇಶ ಕಳುಹಿಸಿದರೆ ಸಾಕು ನಿಮಗೆ ಬೇಕಾದ ಊಟ ತಿಂಡಿ ನಿಮ್ಮ ಮುಂದೆ ಇರುತ್ತದೆ.
ಇನ್ನು ರೈಲ್ವೆ ಇಲಾಖೆ ಪ್ರಯಾಣಿಕರು ಸಂದೇಶ ಕಳುಹಿಸುವುದಕ್ಕಾಗಿ ಒಂದು ಸಂಖ್ಯೆಯನ್ನು ಪ್ರಾರಂಭಿಸಿದೆ ಈ ಸಂಖ್ಯೆ ೮೭೫೦೦೦೧೩೨೩ ಘೋಷಿಸಿರುತ್ತದೆ.
ಆದರೆ ಇದು ಸದ್ಯಕ್ಕೆ ಎಲ್ಲಾ ರೈಲುಗಳಲ್ಲಿ ದೊರೆಯುವುದಿಲ್ಲ ಕೆಲವು ಆಯ್ದ ರೈಲುಗಳಲ್ಲಿ ಈ ಸೇವೆ ಗ್ರಾಹಕರ ನೆರವಿಗೆ ಬರಲಿದೆ. ಗ್ರಾಹಕರ ಪ್ರತಿಕ್ರಿಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಲ್ಲಿ ಸೇವೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಣ್ಣೀರು ಹಾಕಿದ ಪಿ.ಟಿ.ಉಷಾ..?! ಕಾರಣ ಕೇಳಿದ್ರೆ ನಿಮ್ಮ ಕಣ್ಣು ಒದ್ದೆಯಾಗುತ್ತೆ..!

