2022ರಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್ ಮದುವೆ ಆದರು. ಈ ವರ್ಷದ ಆರಂಭದಲ್ಲೇ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಹಸೆಮಣೆ ಏರಿದ್ದಾರೆ.ನಟಿ ರಾಕುಲ್ ಪ್ರೀತ್ ಸಿಂಗ್ಗೆ ಬಾಲಿವುಡ್ನಲ್ಲಿ ದೊಡ್ಡ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅನೇಕ ಸ್ಟಾರ್ ನಟರ ಜತೆ ರಾಕುಲ್ ತೆರೆಹಂಚಿಕೊಂಡಿದ್ದಾರೆ. ಸದ್ಯ, ರಾಕುಲ್ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಜಾಕಿ ಭಗ್ನಾನಿ ಜತೆ ರಾಕುಲ್ ಡೇಟಿಂಗ್ ನಡೆಸುತ್ತಿದ್ದಾರೆ.

ಮೇ ತಿಂಗಳಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರದಲ್ಲಿ ಈ ಜೋಡಿ ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ. ಈ ಮೊದಲು ಕಿಯಾರಾ ಹಾಗೂ ಸಿದ್ದಾರ್ಥ್ ಕೂಡ ಮದುವೆ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ನಂತರ ಮದುವೆ ಆಗಿ ಸರ್ಪ್ರೈಸ್ ನೀಡಿದ್ದರು. ರಾಕುಲ್ ಕೂಡ ಹಾಗೆಯೇ ಮಾಡಲಿದ್ದಾರೆ ಎನ್ನಲಾಗುತ್ತಿದೆ.




