Shira Story:
Feb:15: ಒಂದೆಡೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗ್ತಾ ಇದ್ರೆ, ಇಲ್ಲೊಬ್ರು ಶಾಸಕರು ಊರಿನ ಉತ್ಸವದಲ್ಲಿ ಪಾಲ್ಗೊಂಡು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಾ ಸಂಭ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಹೌದು ಶಾಸಕರಾದ ಎಂ ರಾಜೇಶ್ ಗೌಡ, ಪ್ರಚಾರದ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ಜನಸಾಮಾನ್ಯರ ಸಂಭ್ರಮದಲ್ಲಿ ಪಾಲ್ಗೊಂಡು ಜನಪರ ಕಾರ್ಯಕ್ಕೆ ದೇಣಿಗೆಯನ್ನೂ ನೀಡಿದ್ದಾರೆ.
ರಾಜ್ಯದಲ್ಲಿ ರಾಜಕೀಯ ನಾಯಕರೆಲ್ಲರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಸಮಯದಲ್ಲಿ ಶಿರಾ ಶಾಸಕ ಡಾ ಸಿ ಎಂ ರಾಜೇಶ್ ಗೌಡ ಅವರು ಜನರೊಂದಿಗೆ ಬೆರೆಯುತ್ತಾ ಮತ್ತೆ ಮನೆ ಮಾತಾಗಿದ್ದಾರೆ. ಚುನಾವಣಾ ತರಾತುರಿಯಿಂದ ಸ್ವಲ್ಪ ಹೊರ ಬಂದು ಊರಿನ ಉತ್ಸವದಲ್ಲಿ ಪಾಲ್ಗೊಂಡು ದೇಣಿಗೆ ನೀಡುತ್ತಾ, ಜನರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಶಿರಾ ಬಿಜೆಪಿ ಶಾಸಕರಾದ ಡಾ ಸಿ. ಎಂ.ರಾಜೇಶ್ ಗೌಡ ರವರು ಶಿರಾ ತಾಲೂಕು ಕಚೇರಿ ಮಿನಿ ವಿಧಾನಸೌಧದಲ್ಲಿ ನಡೆದ ಸಂತ ಸೇವಾಲಾಲ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ನಗರಸಭೆ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮತ್ತೊಂದೆಡೆ ರಾಜೇಶ್ ಗೌಡ ರವರು ಶ್ರೀ ವೀರಘಂಟೆ ಮಡಿವಾಳ ಮಾಚಿದೇವರ ದೇವಸ್ಥಾನದ 9ನೇ ವರ್ಷದ ಉತ್ಸವಕ್ಕೆ ಭೇಟಿ ನೀಡಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರು ವಿಜಯ ರಾಜ, ಆರ್ ರಾಮ, ಸೂಡ ಅಧ್ಯಕ್ಷರು ಮಾರುತೇಶ್, ಮಂಜೇಶ್, ಜ್ಞಾನೇಶ್, ವಿಜಯಣ್ಣ, ನಟರಾಜ್, ಗೋವಿಂದರಾಜು, ಮುಂತಾದ ಮುಖಂಡರು ಹಾಜರಿದ್ದರು.
ಇಷ್ಟು ಮಾತ್ರವಲ್ಲದೆ ಶಾಸಕರಾದ ಡಾ. ಸಿ. ಎಂ. ರಾಜೇಶ್ ಗೌಡ ಮದ್ದಕ್ಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಲ್ಲು ಕುಟೀರ ಸಂಘದ ಪರವಾನಗಿ ನವಿಕರಣ ತಗುಲುವ ಖರ್ಚು ವೆಚ್ಚ ಸಂಘಕ್ಕೆ ಸುಮಾರು 2 ಲಕ್ಷ ರೂಗಳನ್ನು ವೈಯಕ್ತಿಕವಾಗಿ ನೀಡಿದರು . ಈ ಸಂದರ್ಭದಲ್ಲಿ ಕಲ್ಲು ಕುಟಿಗರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು. ಒಟ್ಟಾರೆ ಶಾಸಕರ ಸರಳತೆಗೆ ಇದೀಗ ಜನರಂತೂ ಫಿದಾ ಆಗಿರೋದು ಸುಳ್ಳಲ್ಲ..
ಜನರೊಂದಿಗೆ ಸಾಮಾನ್ಯ ಸರಳ ವ್ಯಕ್ತಿಯಾಗಿ ಪಾಲ್ಗೊಂಡ ಶಾಸಕರಿಗೆ ಈಗ ಜನರು ಮಾತ್ರ ಮತ್ತಷ್ಟು ಹತ್ತಿರವಾಗಿದ್ದು ನಿಜಕ್ಕೂ ಸಿ ಎಂ ರಾಜೇಶ್ ಗೌಡರ ಉತ್ತಮ ಕಾರ್ಯಕ್ಕೆ ಉನ್ನತಿ ಎಂದೇ ಹೇಳ ಬಹುದು.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್ ಮುನಿರಾಜು