Wednesday, February 5, 2025

Latest Posts

ಶಿವರಾತ್ರಿ ಪಾದಯಾತ್ರಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ ಸಾಲುಮರದ ತಿಮ್ಮಕ್ಕ..!

- Advertisement -

Hasan news

ಹಾಸನ(ಫೆ.16): ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಬಳ್ಳೂರು ಉಮೇಶ್ ಕುಟುಂಬದವರು ಉಪಚರಿಸಿದರು. ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿರುವ ಸಾವಿರಾರು ಭಕ್ತಾದಿಗಳಿಗೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ದತ್ತಪುತ್ರ ಬಳ್ಳೂರು ಉಮೇಶ್ ಕುಟುಂಬದವರಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಪ್ರತಿ ವರ್ಷ ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ವತಿಯಿಂದ ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳಿಗೆ ಬಳ್ಳೂರು ಗ್ರಾಮದ ಬಸ್ ನಿಲ್ದಾಣ ಮುಂಭಾಗ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಅದೇ ರೀತಿ ಈ ಬಾರಿಯೂ ಸಾವಿರಾರು ಭಕ್ತಾದಿಗಳಿಗೆ ಹಣ್ಣು ಹಂಪಲು ಜೊತೆಗೆ ಬಿಸಿಬಿಸಿಯಾದ ಪಲಾವ್ ಕೇಸರಿಬಾತ್ ಮೊಸರನ್ನ ವಿತರಿಸಲಾಯಿತು. ಸ್ವತಃ ಸಾಲುಮರದ ತಿಮ್ಮಕ್ಕನವರೇ ಭಕ್ತಾದಿಗಳಿಗೆ ಪಲಾವ್ ಬಡಿಸಿದ್ದು ವಿಶೇಷವಾಗಿತ್ತು.. ತಿಮ್ಮಕ್ಕನವರನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪಾದಯಾತ್ರೆಗಳು ಸೆಲ್ಫಿ ಫೋಟೋ ತೆಗೆಸಿಕೊಂಡು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು . ಸಾಲುಮರದ ತಿಮ್ಮಕ್ಕನವರು ಯಾವುದೇ ಮುಜುಗರವಿಲ್ಲದೆ ಪಾದಯಾತ್ರೆಗಳೊಂದಿಗೆ ಫೋಟೋ ತೆಗೆಸಿಕೊಂಡರು.

ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಪೌಂಡೇಶನ್ ವತಿಯಿಂದ ಪಾದಯಾತ್ರೆ ಗಳಿಗೆ ಆತಿಥ್ಯ ನೀಡಲಾಗುತ್ತಿದೆ. ಅದರಂತೆ ಈ ಬಾರಿಯೂ ಕೂಡ ಶುಚಿ ರುಚಿಯಾದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ ಶಿವರಾತ್ರಿ ಹಬ್ಬವು ಹಿಂದು ಸಂಸ್ಕೃತಿ ಹಾಗೂ ದೇವರ ಬಗ್ಗೆ ಆಚಲ ನಂಬಿಕೆ ಇಡುವ ಹಬ್ಬವಾಗಿದೆ. ನೂರಾರು ಕಿ.ಮಿ ದೂರದಿಂದ ನಡೆದು ಬರುವ ಪಾದಯಾತ್ರೆಗಳನ್ನು ಸತ್ಕರಿಸುವುದು ನಮ್ಮೆಲ್ಲರ ಸೌಭಾಗ್ಯ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ , ಸಾಲುಮರದ ತಿಮ್ಮಕ್ಕನವರಿಗೂ ಅವಿನಾಬಾವ ಸಂಬಂಧವಿದ್ದು ಇದಕ್ಕೆ ಚಿರಋಣಿಯಾಗಿ ತಿಮ್ಮಕ್ಕನವರೇ ಭಕ್ತಾದಿಗಳ ಆರೈಕೆಗೆ ನಿಂತು ಉಪಹಾರ ಬಡಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾವತಿ ನಾಗೇಶ್ ಹಾಗೂ ಉಮೇಶ್ ಕುಟುಂಬದವರು ಇದ್ದರು.

ಬಿಜೆಪಿ ಅವರು ಆಡಳಿತಕ್ಕೆ ಬಂದು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು…?ನಿಖಿಲ್ ಪ್ರಶ್ನೆ

ಎಚ್. ಹೊನ್ನಪ್ಪ ನಿಧನಕ್ಕೆ ಸಚಿವ ಅಶ್ವತ್ಥ್ ನಾರಾಯಣ ಸಂತಾಪ

- Advertisement -

Latest Posts

Don't Miss