Saturday, November 8, 2025

Latest Posts

ವಕೀಲ ರಾಕೇಶ್ ಕಿಶೋರ್‌ರನ್ನು ಗಡಿಪಾರು ಮಾಡುವಂತೆ ದಲಿತ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ

- Advertisement -

Tumakuru News: ತಿಪಟೂರು: ತಿಪಟೂರು ನಗರದ ನಗರಸಭೆ ವೃತದಿಂದ ಮಿನಿವಿಧಾನಸೌಧ ವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾನ್ಯ ಗ್ರೇಡ್ ಟು ತಹಶೀಲ್ದಾರ್ ಜಗನ್ನಾಥ್ ರವರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೊಪ್ಪ ಶಾಂತಪ್ಪ ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಮನುವಾದಿಗಳು, ಸನಾತನವಾದಿಗಳು ದೇಶದ ಸಂವಿಧಾನವನ್ನು ಒಪ್ಪದಿರುವ ಸಂಗತಿ ವಕೀಲ ರಾಕೇಶ್ ಕಿಶೋರ್ ಎಂಬುವನ ಮೂಲಕ ಮತ್ತೇ ಬೆಳಕಿಗೆ ಬಂದಿದೆ.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ್ ರಾಕೇಶ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಒಬ್ಬ ವಕೀಲ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮೇಲೆ ಕೋರ್ಟ್ ಹಾಲ್ನಲ್ಲೇ ಶೂ ಎಸೆಯುವ ಪ್ರಯತ್ನ ಮಾಡುತ್ತಾನೆಂದರೆ ಅದು ಅವನ ಮನುವಾದದ ಮನಃಸ್ಥಿತಿ, ಸಂವಿಧಾನ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜಗೂರು ಮಂಜುನಾಥ್ ಮಾತನಾಡಿ, ‘ರಾಕೇಶ್ ಕಿಶೋರ್ ಎಂಬ ವಕೀಲ ದೇಶದ ಸಂವಿಧಾನ, ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನೆ. ಈ ಕೃತ್ಯ ಎಸಗಿದವನನ್ನು ಗಲ್ಲಿಗೇರಿಸಬೇಕು ಆಗ್ರಹಿಸಿದರು.

ಹಿರಿಯ ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ,ಈ ಸನಾತನಿ ರಾಕೇಶ್ ಕಿಶೋರ್ ಎಸಗಿರುವ ದುಷ್ಕೃತ್ಯ ದೇಶದ ಸಂವಿಧಾನ ಮೇಲೆ ನಡೆದಿರುವ ಅಸಹ್ಯಕರ ದಾಳಿಯಾಗಿದ್ದು, ನ್ಯಾಯಾಲಯದ ವಿಚಾರಣೆ ವೇಳೆ ನ್ಯಾಯಪೀಠದ ಮೇಲೆ ಬೂಟುಗಳನ್ನು ಎಸೆದು ನ್ಯಾಯ ದೇವತೆಗೆ ಅಗೌರವನು ತಂದಿರುತ್ತಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ದಲಿತ ಹಿರಿಯ ಮುಖಂಡ ಕುಪ್ಪಾಳು ರಂಗಸ್ವಾಮಿ,ಬಿಳಿಗೆರೆ ಚಂದ್ರಶೇಖರ್, ಪೆದ್ದಿಹಳ್ಳಿ ನರಸಿಂಹಯ್ಯ, ಸುರೇಶ್ ಕಂಚಘಟ್ಟ, ಎನ್ ಎಂ ಮೈಲಾರಯ್ಯ ನಾಗತಿಹಳ್ಳಿ, ಪುಟ್ಟಸ್ವಾಮಿ
ಶಿವಕುಮಾರ್ ಮತಿಘಟ್ಟ, ರಾಘು ಯಗಚಿಗಟ್ಟೆ, ಹರೀಶ್ ಮತ್ತಿಹಳ್ಳಿ, ಮಂಜುನಾಥ್ ಹರಚನಹಳ್ಳಿ, ಜಕ್ಕನಹಳ್ಳಿ ಮೋಹನ್, ಮಹದೇವ್ ಬಿಳಿಗೆರೆ, ಲಕ್ಷ್ಮಮ್ಮ ಬೀಳಿಗೆರೆ, ರಮೇಶ್ ಮಾರನಗೆರೆ, ಬಾಗುವಾಳ ನಿಂಗರಾಜು, ತುರುವೇಕೆರೆ ತಾಲೂಕು ಅಧ್ಯಕ್ಷ ರಂಗರಾಜು, ಹೋಬಳಿ ಅಧ್ಯಕ್ಷ ರಂಗಸ್ವಾಮಿ, ಚಂದ್ರೇಗೌಡರುಮನು, ಶಂಕ್ರಪ್ಪ ರವಿ, ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

- Advertisement -

Latest Posts

Don't Miss