ಬೆಂಗಳೂರು(ಫೆ.20): ರೋಹಿಣಿ ಸಿಂಧೂರಿ ಬಗ್ಗೆ ಪರೋಕ್ಷವಾಗಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕುಸುಮಾ ಹನುಮಂತರಾಯಪ್ಪ, ಕರ್ಮ ಯಾವಾಗಲು ತಿರುಗಿ ಬರುತ್ತದೆ. ಅತೀ ಶೀಘ್ರ ಅಥವಾ ತಡವಾಗಿಯಾದರೂ ಕರ್ಮ ಹಿಂಬಾಲಿಸುತ್ತದೆ ಎಂದಿದ್ದಾರೆ. ಅಂದರೆ ಡಿ.ಕೆ ರವಿ ಸಾವಿಗೆ ರೊಹಿಣಿ ಸಿಂಧೂರಿ ಕಾರಣ ಎನ್ನುವ ಹಾಗೆ ಬರೆದುಕೊಂಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಡಿ ರೂಪಾ, ನಾನು ಓರ್ವ ಹೆಣ್ಣಾಗಿ ನಿನ್ನ ನೋವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇನ್ನೂ ಹಲವು ಮಹಿಳೆಯರ ನೋವು ಕೂಡ ನನಗೆ ಅರ್ಥ ಆಗುತ್ತದೆ. ಆದರೆ ಅಸಹಾಯಕಳು ನಾನು. ಆದರೆ ಕೊನೆಯಲ್ಲಿ ಆಕೆ ಮಹಿಳೆ ಆಗಿದ್ದರೂ ಆಕೆಯ ವಿರುದ್ಧ ತಿರುಗಿ ಬೀಳ್ತಾರೆ. ಈ ರೀತಿ ಮಾಡುತ್ತಿರುವ ಅವಳಿಗೆ ದೇವರು ಸದ್ಬುದ್ಧಿ ನೀಡಲಿ, ಮತ್ತೆ ಪುನರಾವರ್ತನೆ ಆಗದಿರಲಿ ಎಂದು ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಇನ್ನು ರೂಪಾ ಅವರ ಪತಿ ಮೌದ್ಗಿಲ್ ಮೊಬೈಲ್ಗೆ ರೋಹಿಣಿ ಫೋಟೋಗಳು ಹೋಗಿವೆ ಎನ್ನುವ ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ಉಭಯ ಅಧಿಕಾರಿಗಳೇ ಬಹಿರಂಗ ಮಾಡಬೇಕಿದೆ. ಆದರೂ ಆಡಳಿತ ವಿಭಾಗದ ಪ್ರಮುಖ ಹುದ್ದೆಗಳಾದ ಐಎಎಸ್ ಹಾಗು ಐಪಿಎಸ್ ಕಚ್ಚಾಟ ಸರ್ಕಾರಕ್ಕೆ ಮುಜುಗರ ಎನ್ನುವಂತಾಗಿದೆ.