state news
ಬೆಂಗಳೂರು(ಫೆ.21): ಈಗಾಗಲೇ ರಾಜ್ಯದ ಕಡೆ ಕೇಂದ್ರ ರಾಜಕಾರಣಿಗಳು ಚಿತ್ತ ನೆಟ್ಟಿರುವುದು ಹೆಚ್ಚಾಗಿದೆ. ಈ ಹಿಂದೆ ಮೋದಿ, ನಡ್ಡಾ ಹೀಗೆ ಮಂಗಳೂರಿನ ಕಡೆ ಬಂದಿದ್ದರು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರಾವಳಿಯ ಕಡೆ ಬಂದಿದ್ದರು, ಇದೀಗ ಪುನಃ ಸಿಲಿಕಾನ್ ಸಿಟಿ ಹಾಗೂ ಬಳ್ಳಾರಿಯತ್ತ ಫೆ. 23 ಕ್ಕೆ ಮತ್ತೆ ಬರಲಿದ್ದಾರೆ.
ಪದೇ ಪದೇ ರಾಜ್ಯದತ್ತ ಬರುತ್ತಿರುವ ಕೇಂದ್ರದ ನಾಯಕರು ಚುನಾವಣಾ ದೃಷ್ಟಿಯಿಂದ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನು ಬಳ್ಳಾರಿಗೆ ಭೇಟಿ ನೀಡಿ, ಸಂಡೂರಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದ ಬಳಿಕ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ಫೆ. 23ರ ಸಂಜೆ 6ಕ್ಕೆ ಟೌನ್ಹಾಲ್ನಲ್ಲಿ ನಡೆಯಲಿರುವ ಪ್ರಬುದ್ಧರ ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ರಾತ್ರಿ 8 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರ ಜೊತೆ ಶಾ ಸಭೆ ನಡೆಸಲಿದ್ದಾರೆ.