- Advertisement -
ಕರ್ನಾಟಕ ಟಿವಿ : ಇಡಿ ಅಧಿಕಾರಿಗಳಿಂದ ಡಿಕೆ ಶಿವಕುಮಾರ್ ಬಂಧನ ಹಿನ್ನೆಲೆ ಕನಕಪುರದಲ್ಲಿ ಡಿಕೆಶಿ ಅಭಿಮಾನಿಗಳು ಪ್ರತಿಭಟನೆಗಿಳಿದಿದ್ದಾರೆ. ಡಿಕೆ ಶಿವಕುಮಾರ್ ರನ್ನ ಬಿಜೆಪಿ ರಾಜಕೀಯ ದ್ವೇಷ ಹಿನ್ನೆಲೆ ಬಂಧಿಸಿದೆ ಎಂದು ಆರೋಪಿಸಿರುವ ಬೆಂಬಲಿಗರು ನಾಳೆ ಕನಕಪುರ ಬಂದ್ ಗೆ ಕರೆ ನೀಡಿದ್ದಾರೆ. ಇತ್ತ ರಾಮನಗರದಲ್ಲೂ ಸಹ ಡಿಕೆಶಿ ಬೆಂಬಲಿಗರು ಬೀದಿಗಿಳಿದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ರಾಮನಗರದಲ್ಲೂ ಬಂದ್ ಆಚರಿಸಲು ನಿರ್ಧರಿಸಲಾಗಿದೆ.
- Advertisement -