State News:
Feb:26:ಚುನಾವಣಾ ಕಣ ರಂಗೇರ್ತಿದೆ. ಅದಾಗಲೇ ಪ್ರಚಾರ ಕೂಡಾ ಭರದಿಂದ ಸಾಗ್ತಾ ಇದೆ ಈ ಮಧ್ಯೆ ಪ್ರಧಾನಿಯೇ ಈ ಬಾರಿ ಪ್ರಚಾರದಲ್ಲಿ ಫುಲ್ ಆಕ್ಟಿವ್ ಆದಂತಿದೆ ಮತ್ತೆ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಶಿವಮೊಗ್ಗದ ಬಹು ನಿರೀಕ್ಷಿತ ಏರ್ಪೋರ್ಟ್ ಇದೀಗ ಅನಾವರಣ ಗೊಳ್ಳೋದಕ್ಕೆ ಸನ್ನದ್ಧವಾಗಿದೆ. ಈ ಕಾರಣದಿಂದ ಏರ್ಪೋರ್ಟ್ ನ ಉದ್ಘಾಟನೆಗಾಗಿ ಮೋದಿ ಆಗಮಿಸುತ್ತಿದ್ದಾರೆ.
ಇನ್ನು ಫೆಬ್ರವರಿ 27 ರಂದೇ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜನ್ಮದಿನವೂ ಇರುವುದರಿಂದ ಅದೇ ದಿನ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸುವ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ಬೆಳಗಾವಿಗೆ ತೆರಳಿ ಅನೇಕ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇನ್ನು ಶಿವಮೊಗ್ಗ ಏರ್ಪೋರ್ಟ್ ಗೆ 11:30 ಗೆ ಮೋದಿ ಆಗಮಿಸಿ ನಂತರ 11:45 ರಿಂ11:50 ರ ವರೆಗೆ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಿ ನಂತರ 12:00ರಿಂದ 1:15 ರ ವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗ ವಹಿಸಿ ನಂತರ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಬಿಜೆಪಿಯವರು ನೂರು ಸುಳ್ಳು ಹೇಳುತ್ತಾರೆ, ಮೂರು ಕೆಲಸ ಮಾಡುತ್ತಾರೆ: ಹೆಚ್.ಡಿ.ಕೆ