- Advertisement -
State News:
Feb:28: ಸರಕಾರಿ ನೌಕರರು ಪ್ರತಿಭಟನೆಗೆ ಮುಂದಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಕಲಬುರಗಿಯಲ್ಲಿ ಮಾತನಾಡಿದ್ದ ಅವರು ರಾಜ್ಯ ಸರಕಾರ ಶೀಘ್ರವೇ ಗುಡ್ ನ್ಯೂಸ್ ನೀಡಲಿದೆ. ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದರು. ಸರಕಾರ ನೌಕರರ ಬೇಡಿಕೆ ಈಡೇರಿಸಲು ನಮ್ಮ ಸರಕಾರ ಬದ್ಧವಾಗಿದೆ. ಯಾವುದೇ ಸರಕಾರ ನೌಕರರು ಮುಷ್ಕರಕ್ಕೆ ಮುಂದಾಗಬಾರದು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮುಷ್ಕರದ ನಿರ್ಧಾರ ಹಿಂತೆಗೆದುಕೊಳ್ಳಿ. ೭ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದರು.
ನಾಳೆ ಸರ್ಕಾರಿ ಸೇವೆ ಬಂದ್..!? ಏನೇನಿರಲಿದೆ ಏನೆಲ್ಲಾ ವ್ಯತ್ಯಯವಾಗಲಿದೆ..!?
ಸಜ್ಜನರ ಸಮೂಹ ಎಲ್ಲಾದರು ಇದ್ರೆ ಅದು ಶಿಗ್ಗಾವಿಯಲ್ಲಿ: ಮುಖ್ಯಮಂತ್ರಿ ಬೊಮ್ಮಾಯಿ
- Advertisement -