Koppala News: ಕೊಪ್ಪಳದ 220 ಕೆ.ವಿ. ವಿದ್ಯುತ್ ಉಪ ಕೇಂದ್ರದ ಹೊರಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

Koppala News: ಕೊಪ್ಪಳದ ಹಾಲವರ್ತಿಯ 220 ಕೆ.ವಿ. ವಿದ್ಯುತ್ ಉಪ ಕೇಂದ್ರದ ಹೊರಗುತ್ತಿಗೆ ನೌಕರರಿಗೆ ಕಳೆದ ಹಲವು ತಿಂಗಳಿಂದ ವೇತನ ಹಾಗೂ ಪಿ.ಎಫ್., ಇ.ಎಸ್.ಐ ಹಣ ಸಿಗದೆ ಪರದಾಡುವಂತಾಗಿದೆ.

ಡಿಸೆಂಬರ್ 2025ರಿಂದ ಮಾರ್ಚ್ 2026ರವರೆಗೆ 4 ತಿಂಗಳ ವೇತನ ಹಾಗೂ 10 ತಿಂಗಳ ಬಾಕಿ ಇರುವ ಪಿ.ಎಫ್. ಇ.ಎಸ್.ಐ ಮತ್ತು ಜುಲೈ 26ರಿಂದ ಸೆಪ್ಟೆಂಬರ್ 26ರವರೆಗೆ 3 ತಿಂಗಳ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಕ್ಟೋಬರ್ 15ರ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಹೊರಗುತ್ತಿಗೆ ನೌಕರರು ನಿರ್ಧರಿಸಿದ್ದಾರೆ.

​ಈ ಕುರಿತು ಈಗಾಗಲೇ ಸಂಬಂಧಪಟ್ಟ ನೊಡಾಲ್ ಆಫೀಸರ್, ಲೇಬರ್ ಆಫೀಸ್ ಹಾಗೂ ಎ.ಇ.ಎಂ (A.E.M) ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಸಕರು ಹಾಗೂ ಮುಖ್ಯಚೀಫ್ ಆಫೀಸರ್‌ಗಳ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ, ನೌಕರರು ಅನಿವಾರ್ಯವಾಗಿ ಈ ಹೋರಾಟಕ್ಕೆ ಮುಂದಾಗಿದ್ದಾರೆ.

​ವೇತನ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ನೌಕರರು ಎಚ್ಚರಿಕೆ ನೀಡಿದ್ದು, ವಿದ್ಯುತ್ ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿಯೂ ತಿಳಿಸಿದ್ದಾರೆ.

About The Author