Friday, December 13, 2024

Latest Posts

ಕ್ಯಾಟ್ ಫ್ಯಾಷನ್ ಶೋ ವಿಭಿನ್ನ ಶೈಲಿಯಲ್ಲಿ ಮಿಂಚಿದ ಬೆಕ್ಕುಗಳು

- Advertisement -

internationl news:

ನಾವು ಮೊದಲೆಲ್ಲ ಮಹಿಳೆಯರಿಗಾಗಿ ಫ್ಯಾಷನ್ ಶೋಗಳನ್ನು ಮಾಡುವುದನ್ನು ಟಿವಿಗಳಲ್ಲಿ ನೋಡುತಿದ್ದೆವು . ನಂತರ ಪುರುಷರಿಗಾಗಿ ಶೋಗಳನ್ನು ನಡೆಸುತಿದ್ದರು .

ಆದರೆ ಕಾಲ ಬದಲಾದಂತೆ ಜನರು ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿಯಿಂದಾಗಿ ಮನೆಗಳಲ್ಲಿ ನಅಯಿ ಬೆಕ್ಕು ಮೊಲ ಹೀಗೆ ಎಲ್ಲಾ ರೀತಿಯ ಪ್ರಾಣಿಗಳನ್ನು ಸಾಕಿ  ಅವುಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಆರೈಕೆ ಮಾಡುತಿದ್ದಾರೆ.

ಮನೆಯಲ್ಲಿ ಪ್ರಾಣಿಗಳಿದ್ದರೆ. ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಅಷ್ಟೊಂದು ಚೆಂದವಾಗಿರುತ್ತದೆ ಅವುಗಳ ತುಂಟತನ. ಹಾಗೆಯೆ ಅವುಗಳ ತುಂಟತನ ನೋಡುವುದರ ಜೊತೆಗೆ ಅವುಗಳಿಗೆ ಮಕ್ಕಳಂತೆ ಸಿಂಗಾರ ಮಾಡುವುದು ಅವುಗಳಿಗಾಗಿ ಬಟ್ಟೆಗಳನ್ನು ತಯಾರಿಸಿ ತೊಡಿಸುವುದು ಹೀಗೆ ಎಲ್ಲಾರೀತಿಯಿಂದಲೂ ಅವುಗಳಿಗೆ ಪ್ತೀತಿ ಮಾಡುತಿದ್ದಾರೆ. ಆದರೆ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪ್ರಾಣಿಗಳಿಗಾಗಿ ಫ್ಯಾಷನ್ ಶೋಗಳನ್ನು ಮಾಡುತಿದ್ದಾರೆ.

ಬಾಂಗ್ಲಾದೇಶದಲ್ಲಿ ಫೆ 24 ರಂದು  ಬೆಕ್ಕುಗಳ ಪ್ರದರ್ಶನಕ್ಕಾಗಿ ಅತಿದೊಡ್ಡ ಶೋವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ 900 ಹೆಚ್ಚು ಬೆಕ್ಕುಗಳು ವಿವಿಧ ರೀತಿಯ ಉಡುಪುಧರಿಸಿ ಶೋನಲ್ಲಿ ಭಾಗವಿಸಿದ್ದವು. ಸನ್ ಗ್ಲಾಸ್, ಫ್ರಾಕ್ ಸ್ಕರ್ಟ ಟೈ ಸನ್‌ಗ್ಲಾಸ್‌ಗಳು ಬ್ರೆಜಿಲ್ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಶರ್ಟ್‌ಗಳ ಜೊತೆಗೆ ಹೊಂದಿಕೆಯಾಗುವ ಟೋಪಿಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಬೆಕ್ಕುಗಳು ಆಗಮಿಸಿದ್ದವು.

ಇನ್ನು ಈ ಶೋವನ್ನು ನೋಡಲು ಸಾವಿರಾರು ಸಂಖ್ಯಯಲ್ಲಿ ಪ್ರಾಣಿಪ್ರಿಯರು ಆಗಮಿಸಿದ್ದರು

ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!

ಶೇಂಗಾದ ಕಾಳುಗಳಿಂದ ತಯಾರಾದ ಶಿವಲಿಂಗ “ಸಿರಿಧಾನ್ಯ”

 

 

- Advertisement -

Latest Posts

Don't Miss