Friday, November 14, 2025

Latest Posts

ಪ್ರಯಾಣಿಕರು ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿಗಳು

- Advertisement -

state news

ಚೆನ್ನೈ-ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ನಲ್ಲ್ಇ ಪ್ರಯಾಣಿಸುತಿದ್ದ ಪ್ಯಾಂಟ್ರಿ ಕಾರ್ ಸಿಬ್ಬಂದಿಗೆ ದಿನಾಂಕ ರಂದು ಕೆ ಎಸ್ ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ರೂ. 3,000 ನಗದು ಹೊಂದಿದ್ದ ಪರ್ಸ್, ಲ್ಯಾಪ್‌ಟಾಪ್ ಕಂಪ್ಯೂಟರ್, ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಇಟ್ಟಿದ್ದ ಒಂದು ಚೀಲ ದೊರೆಯಿತು
ಚೆನ್ನಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಶ್ರೀ ಗಿರೀಶ್‌ಕುಮಾರ್ ಸಿ ಅವರು ಈ ಚೀಲವನ್ನು ಅವರು ಕುಳಿತಿದ್ದ ಜಾಗದಲ್ಲಿ ಬಿಟ್ಟು ಹೋಗಿದ್ದರು.
ಸಿಬ್ಬಂದಿಗಳು ಅದನ್ನು ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಶ್ರೀ ಅರವಿಂದ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ರೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಶ್ರೀ ಅರವಿಂದ್ ಕುಮಾರ್ ಅವರು ತಮ್ಮ ಬಳಿ ಇದ್ದ ಚಾರ್ಟ್‌ನಿಂದ ಪ್ರಯಾಣಿಕರ PNR ಸಂಖ್ಯೆಯ ಸಹಾಯದಿಂದ ರೈಲ್ವೇ ಮಾಹಿತಿ ಕೇಂದ್ರದ ವ್ಯವಸ್ಥೆ (CRIS) ಮೂಲಕ ಪ್ರಯಾಣಿಕರ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಪ್ರಯಾಣಿಕರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮತ್ತು ತಮ್ಮ ಮೇಲಧಿಕಾರಿಗಳ ಸಮ್ಮುಖದಲ್ಲಿ ಪ್ರಯಾಣಿಕರ ದಾಖಲೆಗಳನ್ನು ಪರಿಶೀಲಿಸಿದ ನಂತರ ವಸ್ತುಗಳನ್ನು ಪ್ರಯಾಣಿಕರಿಗೆ ಹಸ್ತಾಂತರಿಸಿದರು.

ಶ್ರೀ ಗಿರೀಶ್‌ಕುಮಾರ್ ಅವರು ರೈಲ್ವೇ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಕಳೆದುಹೋದ ತಮ್ಮ ವಸ್ತುಗಳನ್ನು ಹಿಂದಿರುಗಿಸುವಲ್ಲಿ ರೈಲ್ವೆ ಅಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆಯಾನ್ನು ಶ್ಲಾಘಿಸಿದರು. ಅವರು ಕರ್ನಾಟಕ ರಾಜ್ಯ ಪೊಲೀಸರಿಗೆ ನೀಡಿದ ಇ-ಲಾಸ್ಟ್ ದೂರನ್ನು ಹಿಂಪಡೆದಿದ್ದಾರೆ.ಪ್ರಯಾಣಿಕರ ಬ್ಯಾಗನ್ನು ಹಿಂದಿರುಗಿಸುವಲ್ಲಿ ರೈಲ್ವೆ ಅಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ.

ಇಟಲಿಯಲ್ಲಿ ಮಹಾದುರಂತ ದೋಣಿ ಇಬ್ಬಾಗವಾಗಿ ವಲಸಿಗರ ಮಾರಣ ಹೋಮ..!

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

ಇನ್ನು ಇಪ್ಪತ್ತು ವರ್ಷಗಳಲ್ಲಿ ಭಾರತ ಮುಂದುವರಿದ ದೇಶವಾಗಲಿದೆ.–ಮೋದಿ

 

- Advertisement -

Latest Posts

Don't Miss