sports news
ಟೀಮ್ ಇಂಡಿಯಾ ಆಟಗಾರನಾದ ವಿಕೇಟ್ ಕೀಪರ್ ಮತ್ತು ಬ್ಯಾಟ್ಸಮನ್ ಆಗಿರುವ ರಿಷಬ್ ಪಂತ್ ಕೆಲವು ತಿಂಗಳುಗಳ ಹಿಂದೆ ಕಾರು ಅಪಘಾತದಲ್ಲಿ ತಿವ್ರ ಗಾಯಗಳಿಂದಾಗಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಈ ಖಚಿತತೆಯ ನಡುವೆ ರಿಷಬ್ ಪಂತ್ ಕ್ರಿಕೇಟ್ ಅಂಗಳಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮನೆಮಾಡಿದೆ. ಈ ವೇಳೆ ಮಾತನಾಡಿದ ಬಿಸಿಸಿಏ ಮಾಜಿ ಅಧ್ಯಕ್ಷ ಸೌರವ್ ಗಂಗೋಲಿ ರಿಷಬ್ ಮರಳಿ ಕ್ರಕೇಟ್ ಅಂಗಳಕ್ಕೆ ಕಾಲಿಡಲು ಕನಿಷ್ಟ ಒಂದರಿಂದ ಎರಡು ವರ್ಷ ಸಮಯ ಹಿಡಿಯುತ್ತದೆ ಎಂದು ಹೇಳಿದರ.
ರಿಷಬ್ರಿಗೆ ಅಪಘಾತ ಸಂಭವಿಸಿದ ನಂತರ ನಾನು ಅವರೊಟ್ಟಿಗೆ ಎರಡು ಬಾರಿ ಮಾತನಾಡಿದ್ದೇನೆ. ಅವರು ಈಗ ತುಂಬಾ ಕಠಿಣ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅವರ ಸ್ಥಾನ ತುಂಬಲು ಯಾರಿಂದಲು ಸಾಧ್ಯವಿಲ್ಲ ಎಂದು ನುಡಿದರು.
ಪ್ರಯಾಣಿಕರು ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರೈಲ್ವೆ ಸಿಬ್ಬಂದಿಗಳು
ಬಾಗಲಕೋಟೆ:ಮೃತ ನಿವೃತ್ತ ಶಿಕ್ಷಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಿದ್ದರಾಮಯ್ಯ