political news
ರಾಜಕಾರಣದಲ್ಲಿ ಬೆಳೆಯುತ್ತಿರುವ ವೇಲೆ ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇದ್ದ ಶಿವಲಿಂಗೇಗೌಡರಿಗೆ ಈಗ ಜೆಡಿಎಸ್ ನ ಅವಶ್ಯಕತೆ ಬೇಕಾಗಿಲ್ಲ. ಎಂದು ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಮಾತನಾಡಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ ಮಾಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನ ನಡೆಯುವಾಗ ಅವರ ಕ್ಷೇತ್ರದಿಂದ ಯಾವ ಜನಾಂಗದವರು ವಿಧಾನಸಭೆಯ ಗ್ಯಾಲರಿಯಲ್ಲಿ ಕುಳಿತಿರುತ್ತಾರೋ ಅವರನ್ನು ಓಲೈಸುವುದಕ್ಕಾಗಿ ಅವರನ್ನು ಮತ್ತು ಅವರ ಸಮಾಜವನ್ನು ಹೊಗಳುತ್ತಾರೆ. ನಾನು ಹತ್ತಿರವಿದ್ದು ಎಲ್ಲ ರೀತಿಯಲ್ಲೂ ಅರ್ಥೈಸಿಕೊಂಡಿದ್ದೇನೆ. ಹಾಸನ ಜಿಲ್ಲೆ ಮತ್ತು ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ ಮಾತ್ರಕ್ಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಚುನಾವಣಾ ಗಿಮಿಕ್‌ಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿರುವ ಹಾಗೂ ರೈತರು ವಿಮಾನಗಳಲ್ಲಿ ಓಡಾಡಬೇಕು ಎಂದು ಹೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೊದಲು ದೇಶದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಿ ಎಂದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?