bengalore news
ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಉದ್ಗಾಟನೆಗೊಂಡ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆ ರಸ್ತಯಲ್ಲಿ ಹತ್ತು ಹಲವಾರು ತೊಂದರೆಗಳಿವೆಯಯೆಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ರಸ್ತೆಯಲ್ಲಿ ತುಂಬಾ ಅಡೆತಡೆಗಳಿದ್ದೂ ಈಗ ಟೋಲ್ ವಿಚಾರವಾಗಿ ಸವಾರರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳುತಿದ್ದಾರೆ. ಇಂದಿನಿಂದ ಎಕ್ಸಪ್ರೆಸ್ ಹೈವೆ ರಸ್ತೆಯಲ್ಲಿ ಟೋಲ್ ಪ್ರಾರಂಭವಾಗಿದ್ದೂ ಭಾರಿ ಮೊತ್ತದ ಟೋಲ್ ಸಂಗ್ರಹಿಸುವ ಮೂಲಕ ಸವಾರರ ಜೇಬಿಗೆ ಕತ್ತರ ಹಾಕುತಿದ್ದಾರೆ ಎಂದು ಸವಾರರು ಟೋಲ್ ಸಂಗ್ರಹಕರ ವಿರುದ್ದ ಕಿಡಿಕಾರಿದ್ದಾರೆ. ಜನರು ಟೋಲ್ ಕಟ್ಟಲು ಹಿಂದೇಟು ಹಾಕುತಿದ್ದಾರೆ. ಟೋಲ್ ಸಂಗ್ರಹಕರ ಜೊತೆ ಕಾದಾಟಕ್ಕೆ ಇಳಿಯುತಿದ್ದಾರೆ.ಹಾಗೂ ಬೆಂಗಳೂರಿನ ಪಕ್ಕದ ಹಳ್ಳಿಗಳಿಗೆ ಸಂಚರಿಸಲು ಪರದಾಡುವಂತಾಗಿದೆ.ಸರ್ವಿಸ್ ರಸ್ತೆ ಇಲ್ಲ ಪೂರ್ವ ಸಿದ್ದತೆ ಮಾಡಿಕೊಳ್ಳದೆ ಟೋಲ್ ಸಂಗ್ರಹಿಸುತಿದ್ದಾರೆ. ಟೋಲ್ ಸಂಗ್ರಹದ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ. ಕರ್ನಾಟಕ ರಕ್ಷಣ ವೇದಿಕೆ ಸದಸ್ಯರು, ಮತ್ತು ಕಾಂಗ್ರೆಸ್ ಮುಖಂಡರು ಟೋಲ್ ವಿರುದ್ದ ಪ್ರತಿಭಟನೆ ಕೈಗೊಂಡರು. ಪ್ರತಿಭಟನೆ ನಿರತ ನಾಯಕರನ್ನು ಪೋಲಿಸ್ ಸಿಬ್ಬಂದಿಗಳು ಪ್ರತಿಭಟನೆಯನ್ನು ಹತ್ತಿಕ್ಕಿ ಪ್ರತಿಭಟನಾಕಾರರನ್ನು ಬಂಧಿಸಿದರು.