Saturday, July 5, 2025

Latest Posts

ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಹಾವಳಿ ಕುರಿತು ಸೆಲಬ್ರೆಟಿಗಳಿಗೆ ಎಚ್ಚರಿಕೆ

- Advertisement -

special news

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಬಹಳ ಜನರ ಮೇಲೆ ಪ್ರಭಾವ ಬೀರಿದೆ ಕೆಲವೊಂದಿಷ್ಟು ಜನ ತಾವು ಮಾಡಿರುವ ಪೋಸ್ಟ್  ಬಗ್ಗೆ ಜನರು ಹಾಕುವ ಕಾಮೆಂಟ್ನಿಂದಾಗಿ ಸಾಕಷ್ಟು ಜನ ಅಪಘಾತಕ್ಕೆ ಒಳಪಟ್ಟಿದ್ದಾರೆ. ಪ್ರಾಣಪಾಯಕ್ಕೆ ಒಳಗಾಗಿದ್ದಾರೆ.ಅದೇ ರೀತಿ ಈಗ ಇನ್ನೊಂದು ತಲೆನೋವು ಸಾಮಾಜಿಕ ಜಾಲತಾಣದಿಂದ ಸರ್ಕಾರಕ್ಕೆ ತಲೆ ಬಿಸಿ ತಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ಜನರು ಮಾತ್ರವಲ್ಲದೆ  ಹಲವಾರು ಸಿನಿಮಾ ತಾರೆಯರು ಪ್ರತಿದಿನ ಜಾಲತಾಣದಲ್ಲಿ ಸಕ್ರಿಯಾಗಿದ್ದಾರೆ. ಇರನ್ನು ಹಲವು ಸಾಮಾನ್ಯ ಜನರು ತಮ್ಮ ನೆಚ್ಚಿನ ನಟರನ್ನು ಹಿಂಬಾಲಿಸುತಿದ್ದಾರೆ.

ಸೆಲಬ್ರೆಟಿಗಳು ಹಣವನ್ನು ಪಡೆದುಕೊಂಡು ತಮ್ಮ ವಿಡಿಯೋದ ಮಧ್ಯೆ ಹಲವಾರು ಕಂಪನಿಗಳ ಜಾಹಿರಾತುಗಳನ್ನ ಹಾಕಿ ಜನರಿಗೆ ಅದನ್ನು ಕೊಳ್ಳುವಂತೆ ಪ್ರೋತ್ಸಾಹಿಸುತಿದ್ದಾರೆ. ಆದರೆ ಸೆಲಬ್ರೆಟಿಗಳು ಇದನ್ನು ಬಳೆಸುತ್ತಾರೋ ಇಲ್ಲವೋ ಗೊತ್ತಿಲ್ಲ. ಇವರ ಮಾತನ್ನು ನಂಬಿಕೊಂಡು ಜನರು ಜಾಹಿರಾತಿನಲ್ಲಿ ಬರುವ ವಸ್ತುಗಳನ್ನು ಕೊಂಡುಕೊಂಡು ನೋವನ್ನು ಅನುಭವಿಸುತಿದ್ದಾರೆ. ಯಾಕೆಂದರೆ ಅವರು ಉಪಯೋಗಿಸುವ ವಸಸ್ತುಗಳಾಗಲಿ ಸೌಂದರ್ಯವರ್ದಕ ಉತ್ಪನ್ನಗಳಾಗಲಿ ಕೆಲವು ಜನರಿಗೆ ಅಂಟಿಕೊಳ್ಳುವುದಿಲ್ಲ ಹಾಗಾಗಿ ಇದರಿಂದ ಜನರು ನೋವು ಅನುಭವಿಸುತಿದ್ದಾರೆ. ಅದಕ್ಕಾಗಿ ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಜಾಹಿರಾತು ಪ್ರಚಾರ ಮಾಡುವ ಸೆಲಬ್ರೆಟಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಸೆಲೆಬ್ರಿಟಿಗಳು, ಪ್ರಭಾವಶಾಲಿಗಳು ಮತ್ತು ಅಗಾಧ ಅನುಯಾಯಿಗಳನ್ನು ಹೊಂದಿರುವ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಪ್ರಚಾರ ಮಾಡುವವರು ತಾವು ನಿರ್ದಿಷ್ಟ ಸಾಧನಗಳು ಮತ್ತು ಸೇವೆಗಳನ್ನು ಯಾವ ಉದ್ದೇಶಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕಡ್ಡಾಯವಾಗಿ ತಿಳಿಸಬೇಕು, ಹಣದ ಲಾಭಕ್ಕೋಸ್ಕರವೇ, ಕೊಡುಗೆಗಾಗಿಯೇ, ವಿನಿಮಯ ವ್ಯವಹಾರಗಳಿಗಾಗಿಯೇ ಅಥವಾ ಯಾವುದೇ ಇತರ ಕ್ವಿಡ್-ಪ್ರೊ-ಕ್ವೋ ವ್ಯವಸ್ಥೆಗಾಗಿಯೇ ಎಂದು ತಿಳಿಸಬೇಕು ಎಂದು ಹೇಳಿದೆ.

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 4

Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 3

ಎಕ್ಸಪ್ರೆಸ್ ಹೈವೆ ಉದ್ಗಾಟನೆಯಾದ ಒಂದೇ ಗಂಟೆಯಲ್ಲಿ ಕಾರು ಪಲ್ಟಿ

- Advertisement -

Latest Posts

Don't Miss