ನಿಮಗೆ ನೋವು ನೀಡಿದವರು ನೋವು ಅನುಭವಿಸ್ತಾರೆ-ವಿಜಯಲಕ್ಷ್ಮೀ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರ್ತಾರೆ. ಒಂದಲ್ಲ ಒಂದು‌ ವಿಚಾರವನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ. ಈಗ ವಿಜಯಲಕ್ಷ್ಮಿ ಟ್ವೀಟ್ ಒಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


ಸಂಡೇ ಕೋಟ್ ಅಂತಾ ಕ್ಯಾಪ್ಷನ್ ಹಾಕಿ ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ. ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಸುಮ್ಮನೇ ಕಾಯುತ್ತಿರಿ. ನಿಮಗೆ ಯಾರು ನೋವು ನೀಡಿರುತ್ತಾರೆ ಅವರು ನೋವು ಅನುಭವಿಸ್ತಾರೆ. ಒಂದು ವೇಳೆ ನೀವು ಅದೃಷ್ಟಶಾಲಿಗಳಾದ್ರೆ ಆ ನೋವನ್ನ ದೇವರು ನಿಮಗೆ ನೋಡಲು ಅವಕಾಶ ಕೊಡುತ್ತಾನೆ ಅಂತಾ ಟ್ವೀಟ್ ಮಾಡಿದ್ದಾರೆ.ಅಷ್ಟಕ್ಕೂ ವಿಜಯಲಕ್ಷ್ಮಿ ಈ ಟ್ವೀಟ್ ಹಿಂದಿನ ರಹಸ್ಯವೇನು? ಯಾರಿಗೆ ಈ ಮಾತನ್ನ ವಿಜಯಲಕ್ಷ್ಮಿ ಹೇಳ್ತಾ ಇದ್ದಾರೆ ಅನ್ನೋ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. 

About The Author