Saturday, July 27, 2024

Latest Posts

IND vs SA: ಧರ್ಮಶಾಲಾದಲ್ಲಿ ಇಂದು ಮೊದಲ T20 ಪಂದ್ಯ..!

- Advertisement -


2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಭಾರತ, ಸದ್ಯ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ, ವಿಶ್ವ ಕಪ್ ತಯಾರಿ ನಡೆಸಿರುವ ಎರಡು ತಂಡಗಳಿಗೆ ಪೂರ್ವಸಿದ್ಧತೆಯ ಟೂರ್ನಿ ಎನಿಸಿಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಇಂದು, ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು. ಈ ಸರಣಿಗಾಗಿ ಎರಡೂ ತಂಡಗಳು ಭರ್ಜರಿ ಅಭ್ಯಾಸ ನಡೆಸಿವೆ.

ಬಹುತೇಕ ಹೊಸ ಮುಖಗಳನ್ನೇ ಹೊಂದಿರುವ ದಕ್ಷಿಣ ಆಫ್ರಿಕಾ ತಂಡವನ್ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್ ಮುನ್ನಡೆಸುತ್ತಿದ್ದಾರೆ. ಏಕದಿನ ವಿಶ್ವಕಪ್ ವೈಫಲ್ಯದ ಬಳಿಕ, ಹಿರಿಯ ಆಟಗಾರರಾದ ಹಾಶಿಂ ಆಮ್ಲ, ಇಮ್ರಾನ್ ತಾಹಿರ್, ಜೆಪಿ ಡುಮಿನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರೆ, ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಟೆಸ್ಟ್ ಸರಣಿಗಾಗಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಹಿರಿಯರ ಅನುಪಸ್ಥಿತಿಯಲ್ಲಿ ಪ್ರವಾಸಿಗರಿಗೆ, ನಾಯಕ ಕ್ವಿಂಟನ್ ಡಿ ಕಾಕ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ರಸ್ಸಿ ವಾನ್ ಡರ್ ಡುಸೆನ್​ರ ಮೇಲೆ ಹೆಚ್ಚು ಅವಲಂಬಿಸಿದೆ.

ಇನ್ನೂ ಬೌಲಿಂಗ್ ವಿಭಾಗದಲ್ಲಿ ವೇಗಿ ಕಗಿಸೋ ರಬಾಡ, ಆಲ್ರೌಂಡರ್ ಆನ್ರಿಚ್ ನೋರ್ಜೆ ಬಲವಾಗಿದ್ದಾರೆ. ಮತ್ತೊಂದು ಕಡೆ ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿರುವ ಭಾರತ, ತವರಿನಲ್ಲೂ ಅಂತಹದ್ದೇ ಪ್ರದರ್ಶನ ನೀಡುವ ಭರವಸೆಯಲ್ಲಿದೆ. ಅದರಲ್ಲೂ ವಿಶ್ವಕಪ್ ತಂಡದಲ್ಲಿ ಸ್ಥಾನ ಖಾಯಂ ಮಾಡಿಕೊಳ್ಳುವ ಕನಸಿನಲ್ಲಿರುವ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಹಾಗೂ ಮನೀಷ್ ಪಾಂಡೆಗೆ ತಮ್ಮ ಸ್ಥಾನವನ್ನು ಗಟ್ಟಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಇನ್ನೂ ತಂಡದ ಸ್ಪಿನ್ ಜೋಡಿ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್​ರಿಗೆ ವಿಶ್ರಾಂತಿ ನೀಡಿರುವ ಕಾರಣ, ಸ್ಪಿನ್ ಬೌಲಿಂಗ್ ಆಲ್ರೌಂಡರ್​ಗಳಾದ ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ ಹಾಗೂ ಲೆಗ್​ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಸಾಮರ್ಥ್ಯ ಸಾಭೀತು ಪಡಿಸಬೇಕಿದೆ. ಉಳಿದಂತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಒಪನರ್ ಗಳಾದ ಶಿಖರ್ ಧವನ್, ರೋಹಿತ್ ಶರ್ಮಾ ಜವಾಬ್ದಾರಿಯುತ ಪ್ರದರ್ಶನ ನೀಡಬೇಕಿದೆ.

https://www.youtube.com/watch?v=p-fUcLSYHx0
- Advertisement -

Latest Posts

Don't Miss