Sandalwood news:
ಲೂಜ್ ಮಾದ ಯೋಗಿ ನಟನೆಯ 50 ನೆ ಸಿನಿಮಾವನ್ನು ಹೆಡ್ ಬುಷ್ ಸಿನಿಮಾದ ನಿರ್ದೇಶಕ ಶೂನ್ಯ ನಿರ್ದೇಶನ ಮಾಡಲಿದ್ದಾರೆ.ಸ್ಟೈಲಿಶ್ ಗ್ಯಾಂಗ್ ಸ್ಟಾರ್ ಕಥೆಯುಳ್ಳ ಈ ಸಿನಿಮಾದ ಕಥೆಯನ್ನು ಯೋಗಿಯವರಿಗೆ ಹೇಳಿದಾಗ ತುಂಬಾ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನನಗೂ ಈ ತರಹದ ಕಥೆಯೇ ಬೇಕಾಗಿತ್ತು ಎಂದು ಹೇಳಿದ್ದಾರೆ.ಇನ್ನು ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮತ್ತು ಮುಹೂರ್ತವನ್ನು ಏಪ್ರಿಲ್ 9 ರಂದು ನವರಂಗ್ ಚಿತ್ರಮಂದಿರದಲ್ಲಿ ನೆರವೇರಿಸಲಿದ್ದೇವೆ.
ನಟ ಲೂಜ್ ಮಾದ ಯೋಗಿ ಈ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಲಿದ್ದಾರೆ ಚಿತ್ರದ ನಾಯಕಿಯ ಆಯ್ಕೆಯಲ್ಲಿದ್ದೇವೆ ಏಪ್ರಿಲ್ ಅಂತ್ಯದಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದೂ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎರಡನೆ ಹಂತದ ಚಿತ್ರೀಕರಣದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಿದ್ದೇವೆ.
ಇನ್ನು ಈ ಸಿನಿಮಾಕ್ಕೆ ಉದ್ಯಮಿ ಡಿ ವೈ ರಾಜೇಶ್ ಬಂಡವಾಳ ಹಾಕುವ ಮೂಲಕ ಚಂದನವನಕ್ಕೆ ನಿರ್ಮಾಪಕರಾಗಿ ಹೆಜ್ಜೆ ಇಡಲಿದ್ದಾರೆ. ಹೆಡ್ ಬುಷ್ ಸಿನಿಮಾವನ್ನು ಚಿತ್ರೀಕರಿಸಿದ ಕ್ಯಾಮರಾಮನ್ ಸುನೋಜ್ ಸಿನಿಮಾದಲ್ಲಿ ಸಿನಿಮಾಟೋಗ್ರಾಫಿ ಮಾಡಲಿದ್ದಾರೆ . ಇನ್ನು ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಮತ್ತು ಮುಹೂರ್ತಕ್ಕೆ ಡಾಲಿ ಧನಂಜಯ್ ಹಾಗೂ ಅಗ್ನಿ ಶ್ರೀದರ್ ಆಗಮಿಸಲಿದ್ದಾರೆ ಎಂದು ನಿರ್ದೆಶಕ ಶೂನ್ಯ ಹೇಳಿದ್ದಾರೆ.