Sunday, December 1, 2024

Latest Posts

ಬಿಜೆಪಿ ಸೇರಲಿದ್ದಾರಾ ಕಿಚ್ಚ ಸುದೀಪ್…?

- Advertisement -

ರಾಜಕೀಯ ಸುದ್ದಿ :

ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗೇರುತ್ತಿದ್ದು ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದೇ ರೀತಿ ಕಳೆದ ಬಾರಿ ಸಂಸದಿಯ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬೆಂಬಲ ನೀಡುವ ಮೂಲಕ ಸಂಸದಿಯ ಚುನಾವಣೆಯಲ್ಲಿ ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿದ್ದರು .

ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕನ್ನಡದ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಬಲೆ ಬೀಸಿದಂತೆ ಕಾಣುತ್ತಿದೆ ಯಾಕೆಂದರೆ ಈಗಾಗಲೆ ಚುನಾವಣಾ ಪ್ರಚಾರಕ್ಕೆ ಕುರಿತಾದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದರ ಮೂಲಕ ಅವರು  ಬಿಜೆಪಿಗೆ ಸೇರ್ಪೆಡಯಾಗುವ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗ್ತಾರಾ ಅಥವಾ ಚುನಾವಣೆ ಬೆಂಬಲ ಸೂಚಿಸುತ್ತಾರಾ ಎನ್ನುವ ಅನುಮಾನ ಕಾಡುತ್ತಿದೆ.

ಆದರೆ ಇದರ ಬಗ್ಗೆ ಇದುವರೆಗೂ ಯಾವುದೇ ರೀತಿಯ ಅಧಿಕೃತ ಮಾಹಿತಿ ಸಿಕ್ಕಿಲ್ಲ ಕುಟುಂಬದ ಜೊತೆ ಚರ್ಚಿಸಿ ಅಂತಿಮ ನಿರ್ದಾರ ಕೈಗೊಳ್ಳಲಿದ್ದಾರೆ. ಇಂದು ಮಧ್ಯಾನ ಮುಖ್ಯಮಂತ್ರಿಗಳ ಜೊತೆ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿಲಿದ್ದಾರೆ.ಸಭೆ ಮುಗಿದ ಬಳಿಕ ನಟ ಸುದೀಪ್ ಅವರ ರಾಜಕೀಯ ಬೆಳವಣಿಗೆ ಬಗ್ಗೆ ತಿಳಿಯಲಿದೆ.

ಇನ್ನು ಇದರ ಬಗ್ಗೆ ಸುರಪುರ ಶಾಸಕ ರಾಜುಗೌಡ ಅವರು ಸುದೀಪ್ ಅವರ ಕುರಿತು ಈ ರೀತಿಯಾಗಿ ಹೇಳಿದ್ದಾರೆ.

ರಾಜುಗೌಡ ನನ್ನ ತಮ್ಮ ಇದ್ದಹಾಗೆ ಅವರು ಯಾವಾಗ ಬೇಕಾದರೂ ಚುನಾವಣಾ ಪ್ರಚಾರಕ್ಕೆ ಕರೆದರೂ ಬರುವುದಾಗೆ ಹೇಳಿದ್ದಾರೆ.ಆದರೆ ಈಗಾಗಲೆ ಈ ಕುರಿತು ಕೆಲವು ನಕಾರಾತ್ಮಕ ಅಭಿಪ್ರಾಯಗಳು ಕೆಳಿಬಂದಿವೆ ಎಂದರು.  ಇಂದು ಮಧ್ಯಾನದ ಸಭೆ ಬಳಿಕ ನಟ ಸುದೀಪ್ ಅವರ ರಾಜಕೀಯ ಜೀವನದ ಬಗ್ಗೆ ತಿಳಿಯಲಿದೆ.

ಸಮಯಪ್ರಜ್ಞೆಯಿಂದ ರೈಲು ದುರಂತ ತಪ್ಪಿಸಿದ ಧೀರ ಮಹಿಳೆ

ಪ್ರಚಾರದ ವೇಳೆ ಹಣ ಎಸೆದ ಪ್ರಕರಣ

ವಾರಸುದಾರರಿಲ್ಲದೇ ಆರ್ಬಿಐಗೆ ವರ್ಗಾವಣೆಯಾದ 35 ಸಾವಿರ ಕೋಟಿ..

 

 

 

- Advertisement -

Latest Posts

Don't Miss