Friday, August 29, 2025

Latest Posts

ಸಂಸದರಿಗೆ ಅವಮಾನ : ಜನರಿಗೆ ಸ್ವಾಮೀಜಿ ಪಾಠ

- Advertisement -

ಪಾವಗಡ: ಸಂಸದ ಎ ನಾರಾಯಣ ಸ್ವಾಮಿ ರವರಿಗೆ ಪ್ರವೇಶ ನಿರಾಕರಿಸಿ ವಿವಾದಕ್ಕೆ ಕಾರಣವಾಗಿದ್ದ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಇಂದು ಮಧ್ಯಾಹ್ನ ಚಿತ್ರದುರ್ಗದ ಶ್ರೀಕೃಷ್ಣ ಯಾದಾವನಂದ ಸ್ವಾಮೀಜಿ ಸಮಾಜದ ಮುಖಂಡರೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಿನ್ನೆ ಸಿಎಸ್ಸಾರ್ ನಿಧಿಯನ್ನು ತಂದು ಗೊಲ್ಲರಹಟ್ಟಿಗೆ ಮೂಲ ಸೌಕರ್ಯ ಒದಗಿಸಲು ತಮ್ಮ ತಂಡದೊಂದಿಗೆ ಬಂದಿದ್ದ ಸಂಸದರಿಗೆ ಅಸ್ಪೃಶ್ಯ ಮಾದಿಗ ಸಮುದಾಯದವರು ಎನ್ನುವ ಕಾರಣಕ್ಕೆ ಹಟ್ಟಿಯ ಹೊರಗೆ ತಡೆದದ್ದು ಸರಿಯಲ್ಲ , ಎಲ್ಲ ಸಮಾಜದವರೊಂದಿಗೆ ಹೊಂದಿಕೊಂಡು ಕಾಡುಗೊಲ್ಲ ಸಮಾಜ ಹೊಗಬೇಕು ಎಂದು ಸ್ವಾಮೀಜಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು .

ಇದೇ ಶುಕ್ರವಾರ ಮತ್ತೊಮ್ಮೆ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಸಂಸದ ನಾರಾಯಣ ಸ್ವಾಮಿಯವರನ್ನು ಆಹ್ವಾನಿಸಿ ಗೌರವಯುತವಾಗಿ ಸ್ವಾಗತಿಸಿ ಕಾರ್ಯಕ್ರಮ ನೆಡೆಸಲು ಗ್ರಾಮಸ್ಥರು ನಿರ್ಧರಿಸಿದರು .

ಸ್ವಾಮಿಜಿಯವರೊಂದಿಗೆ ಗೊಲ್ಲ ಸಮಾಜದ ಮುಖಂಡರಾದ ಸಿರಿಯಜ್ಜ , ಸಿದ್ದಪ್ಪ , ಬಸವರಾಜ್ ಶಾತ್ರಿ , ನರಸಿಮ್ಹಣ್ಣ , ಮಹಾಲಿಂಗಪ್ಪ , ಓಬಳೇಶ್ ಮತ್ತಿತರರು ಇದ್ದರು .

- Advertisement -

Latest Posts

Don't Miss