ಕರ್ನಾಟಕ ಟಿವಿ : ಹತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾಯ್ತು. ಇದೀಗ
ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಜನ ನೆರೆಯಿಂದ ನೊಂದಿದ್ರು ಕಣ್ಣಿರೊರೆಸುವ ಕೆಲಸವನ್ನ ಮೋದಿ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದು ಭಾಷಣ ಮಾಡುವ ಮೋಡಿ ಕನ್ನಡಿಗರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗಾಗಿ ಜನ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಭ್ರಮನಿರಸನ ಗೊಂಡಿದ್ದಾರೆ. ಇನ್ನು ಜೆಡಿಎಸ್ ಈ ವೇಳೆ ಜನಕ್ಕೆ ಇಷ್ಟವಾಗುತ್ತೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಕನ್ನಡಿಗರ ಪ್ರಕಾರ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ನಟ, ರಾಜಕಾರಣಿ ಉಪೇಂದ್ರರ ಉತ್ತಮ ಪ್ರಜಾಕೀಯ ಕಡೆ ಒಲವು ತೋರಿಸ್ತಿದ್ದಾರೆ..
ಇನ್ನೂ ಹಿರಿಯ ರಾಜಕಾರಣಿಗಳ ಜೊತೆಯೂ ಉಪೇಂದ್ರ ಸ್ಪರ್ಧೆ ಒಡ್ಡಿದ್ದಾರೆ. ಹಾಲಿ ಮಾಜಿ ಸಿಎಂ ಗಳ ನಡುವೆ ಉಪೇಂದ್ರ ಸಹ ಉತ್ತಮ ಪೈಪೋಟಿ ನೀಡಿದ್ದಾರೆ. ಕರ್ನಾಟಕ ಟಿವಿ ನನ್ ಲೈನ್ ಪೋಲ್ ನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ, ನಂತರ ಉಪೇಂದ್ರ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದಾರೆ.
ಪ್ರಸ್ತುತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದ ರಾಜಕಾರಣದಿಂದ ಬೇಸತ್ತಿರುವ ಜನ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಕಡೆ ಒಲವು ತೋರುತ್ತಿದ್ದಾರೆ. ಉಪೇಂದ್ರ ಈಗಲಾದರೂ ಜನರ ಬಳಿ ತೆರಳಿ ಸಮಸ್ಯೆ ಕೇಳಿ ವಿಧಾನಸಭಾ ವಾರು ನಾಯಕರನ್ನ ಗುರುತಿಸಿ ಜವಾಬ್ದಾರಿ ನೀಡಿದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿ ಹುಟ್ಟುಹಾಕಬಹುದು.
ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಯಾರು ಸಿಎಂ ಆಗಬೇಕು, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಉಪೇಂದ್ರ, ಚಕ್ರವರ್ತಿ ಸೂಲಿಬೆಲೆ, ಡಿಕೆ ಶಿವಕುಮಾರ್, ಡಾ ಅಶ್ವಥ್ ನಾರಾಯಣ್.. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ