Thursday, November 27, 2025

Latest Posts

ಗಂಡನ ಶೋಕಿಗೆ ಅಮಾಯಕ ಪತ್ನಿಯ ಆತ್ಮಹತ್ಯೆ

- Advertisement -

ಕ್ರೈಮ್ ನ್ಯೂಸ್:

ಬೆಂಗಳೂರಿನ ಕೆಂಗೇರಿಯಲ್ಲಿ  ಪವಿತ್ರಾ  ಎನ್ನುವ ಮಹಿಳೆ ಗಂಡನ ಕಿರುಕುಳಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ .

ಸುಮುಖ ಮರ್ಚಂಟ್ಸ್  ಪ್ರೈವೆಟ್ ಲಿ. ಮಾಲಿಕರಾಗಿರುವ ಚೇತನಗೌಡ ಎನ್ನುವ ಉದ್ಯಮಿ ಮೊದಲ ಪತ್ನಿಗೆ ವಿಚ್ಚೇದನ ನೀಡಿ ಪವಿತ್ರಾ ಎನ್ನುವವರನ್ನು ಮದುವೆಯಾಗಿದ್ದರು. ಮದುವೆ ನಂತರ ಚೇತನ್ ದಂಪತಿಗಳು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು. ಈ ಪವಿತ್ರಾ ಅದೇ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದರು. ಮನೆಯಲ್ಲಿ ಸುಂದರವಾದ ಹೆಂಡತಿ ಇದ್ದರು ಮೂರನೇ ಮಹಿಳೆಯ ಸಹವಾಸ ಮಾಡಿಕೊಂಡಿದ್ದ ಈ ಚೇತನ್ ಗೌಡ. ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು ಮೂರನೆ ಮಹಿಳೆಯ ಜೊತೆಗಿನ ಸಂಬಂದದ ಬಗ್ಗೆ ತಿಳಿದ ಪವಿತ್ರ ಚೇತನ್ ಹತ್ತಿರ ಪ್ರಶ್ನೆ ಮಾಡಿದ್ದಾಳೆ. ಇಬ್ಬರು ಹಾಳಾಗಿ ಹೋಗ್ತೀರಾ ಎಂದು ಹೇಳಿದಾಗ ಚೇತನ್ ಮರು ಉತ್ತರವಾಗಿ ನಾನು  ಗಂಡಸು ಶೋಕಿ ಮಾಡ್ತೀನಿ ಎಂದು ಹೇಳಿದ್ದಾಳೆ.

ಇಬ್ಬರು ಸೇರಿ ಮಕ್ಕಳು ಮಾಡೋಣವೆಂದರೆ ಅದಕ್ಕೂ ಬೇಡ ಅಂತೀಯಾ ಈ ವಯಸಲ್ಲಿ ಮಕ್ಕಳು ಮಾಡದೆ ಬೇರೆ ಯಾವ ವಯಸ್ಸಲ್ಲಿ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಕೇಳಿದ್ದಾಳೆ. ಈ ಎಲ್ಲಾ ಸಂಭಾಷಣೆಗಳನ್ನು ವೀಡಿಯೋ ಮಾಡಿ ವ್ಯಾಟ್ಯಪ್ ಸ್ಟೇಟಸ್ ಹಾಕಿ ನೇರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ವೀಡಿಯೋ ನೋಡಿದ ಪವಿತ್ರಾ ತಾಯಿ ತಕ್ಷಣ ಮನೆಗೆ ಬಂದಾಗಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ . ಆತ್ಮಹತ್ಯೇಗೂ ಮುನ್ನ ಮೂರು ವೀಡಿಯೋಗಳನ್ನು ಅಪ್ಲೋಡ ಮಾಡಿದ್ದೂ ಈ ವಿಡಿಯೋದಲ್ಲಿ ಚೇತನ್ ಪತ್ನಿ ಮೇಲೆ ಹಲ್ಲೆ ನಡೆಸಿರುವುದು ಮತ್ತು ಇನ್ನೆರಡರಲ್ಲಿ ಇಬ್ಬರ ಸಂಬಾಷಣೆ ಇರುವುದು ಬೆಳಕಿಗೆ ಬಂದಿದೆ.

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ…

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

 

- Advertisement -

Latest Posts

Don't Miss