ಸಿನಿಮಾ ಸುದ್ದಿ: ಕೋಟಿಗೊಬ್ಬ’ನ ಹೃದಯವಂತಿಕೆ ಇಡೀ ಅಭಿಮಾನಿ ಬಳಗವೇ ಮೆಚ್ಚಿಸುವಂತಿದೆ. ಕರುನಾಡ ‘ರನ್ನ’ನ ಹೃದಯವಂತಿಕೆ, ಸರಳತೆಗೆ ಈ ವಿಡಿಯೋ ಸಾಕ್ಷಿಯಾಗಿದೆ.
ಅಭಿನಯ ಚಕ್ರವರ್ತಿ ಸುದೀಪ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ಅವರು ರಿಯಲ್ ಹೀರೋ..ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಸೂಪರ್ ಸ್ಟಾರ್..ಕಿಚ್ಚನ ಹೃದಯವಂತಿಕೆ, ಸರಳತೆ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಕೋಟಿಗೊಬ್ಬನನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಪ್ರತಿಯೊಬ್ಬ ಸುದೀಪಿಯನ್ಸ್ ಗೂ ಇದ್ದೇ ಇರುತ್ತದೆ. ಆ ಆಸೆ ಈಡೇರಿಕೆಗೆ ಸಮಯ ಕೂಡಿ ಬರಬೇಕು ಅಷ್ಟೇ. ಈಗ ಸುದೀಪ್ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕ್ಷಿ ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ.. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮ ನೆಚ್ಚಿನ ಸ್ಟಾರ್ ನನ್ನು ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಇಷ್ಟ. ರನ್ನ ಸಿನಿಮಾದ ಥಿತಲಿ ಹಾಡು ನನಗೆ ಸ್ಪೂರ್ತಿ ಎಂದಿದ್ದಾರೆ. ಕೋಟಿಗೊಬ್ಬನನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಕಿಚ್ಚನ ಈ ಹೃದಯವಂತಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ.
10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!