Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಉಂಟಾಗುತ್ತಲೇ ಇದೆ. ಸರ್ಕಾರದ ನಿಯಮಗಳನ್ನು ಹಾಗೂ ಆದೇಶಗಳನ್ನು ಪಾಲಿಸಬೇಕಿರುವ ಅಧಿಕಾರಿ ವರ್ಗ, ಪಾಲಿಕೆ ಅಧಿಕಾರಿಗಳ ಬದಲಾವಣೆಯ ಆದೇಶಕ್ಕೂ ಡೋಂಟ್ ಕೇರ್ ಎನ್ನುತ್ತಿದೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡಲು ಮರೆತರಾ ಪಾಲಿಕೆಯ ಅಧಿಕಾರಿಗಳು ಎಂಬುವಂತ ಅನುಮಾನ ದಟ್ಟವಾಗಿದೆ.
ಹೌದು.. 2 ವರ್ಷಕ್ಕಿಂತಲೂ ಹೆಚ್ಚು ಅವಧಿ ಕರ್ತವ್ಯದಲ್ಲಿರುವ ಅಧಿಕಾರಿಗಳ ಬದಲಾವಣೆಗೆ ಸಚಿವಾಲಯದಿಂದ ಆದೇಶ ಬಂದಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಕಳೆದ 10-15 ವರ್ಷಗಳಿಂದ ಅಧಿಕಾರಿಗಳು ಒಂದೇ ಕಡೆ ಬೀಡು ಬಿಟ್ಟಿದ್ದಾರೆ. ಒಂದೇ ಕಡೆ ಹತ್ತಾರು ವರ್ಷಗಳಿಂದ ಕರ್ತವ್ಯದಲ್ಲಿದ್ದರೂ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಬಂದಿರುವ ಬೆನ್ನಲ್ಲೇ ಅಧಿಕಾರಿಗಳ ಬದಲಾವಣೆಗೆ ಆದೇಶ ನೀಡಿದ್ದರೂ ಆದೇಶ ಮಾತ್ರ ಪಾಲನೆಯಾಗುತ್ತಿಲ್ಲ.
ಇನ್ನೂ ನಗರಾಭಿವೃದ್ದಿ ಇಲಾಖೆಯಿಂದ ಲಿಖಿತ ಆದೇಶ ಬಂದರೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಉನ್ನತ ಅಧಿಕಾರಿಗಳ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಎ ಮತ್ತು ಬಿ ಗ್ರೂಪ್ ವರ್ಗದ ಅಧಿಕಾರಿಗಳ ಬದಲಾವಣೆಗೆ ಲಿಖಿತ ಆದೇಶ ಬಂದಿದೆ. ಪಾಲಿಕೆ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳ ಬದಲಾವಣೆಗೆ ಲಿಖಿತ ಆದೇಶ ಮಾಡಿರೋ ಸಚಿವಾಲಯ ತಕ್ಷಣವೇ ಕಾರ್ಯಗತಗೊಳಿಸಲು ಸೂಚನೆ ನೀಡಿದೆ. ಸಚಿವಾಲಯದ ಲಿಖಿತ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುವಂತಾಗಿದೆ. ಈ ಬಗ್ಗೆ ಪಾಲಿಕೆ ಮೇಯರ್ ಮೀಟಿಂಗ್ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ.
ಇನ್ನೂ ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ವಾ ಪಾಲಿಕೆ ಅಧಿಕಾರಿಗಳು..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿಬಂದ ದೂರಿನ ಅನ್ವಯ ಅಂತಹ ಅಧಿಕಾರಿಗಳ ಬದಲಾವಣೆಗಾಗಿ ಸೂಚನೆ ನೀಡಿ ಕಳೆದ ಜೂನ್ 20 ರಂದು ಸಚಿವಾಲಯದಿಂದ ಸೂಚನೆ ಇದ್ದರೂ ಸರ್ಕಾರಕ್ಕೆ ಮಾತ್ರ ಪಾಲಿಕೆ ಅಧಿಕಾರಿಗಳು ಉತ್ತರ ನೀಡಿಲ್ಲ.