ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಐತಿಹಾಸಿಕ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಗರದ ಪ್ರಮುಖ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಪಟಾಕಿ ಸಿಡಿಸಿ, ನೃತ್ಯ ಮಾಡಿ ಹಾಗೂ ಘೋಷಣೆಗಳನ್ನು ಕೂಗಿ ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಆರ್‌ಸಿಬಿ ಫೈನಲ್ ಪಂದ್ಯ ವಿಜಯ ಸಾಧಿಸುತ್ತಿದ್ದಂತೆ ಹುಬ್ಬಳ್ಳಿಯ...
ಯಾವುದೇ ಮುನ್ನಚ್ಚರಿಕೆಯನ್ನು ನೀಡದೇ ರಸ್ತೆ ಬಂದ್ ಮಾಡಿ ಏಕಾಏಕಿ ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಕಿತ್ತುಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲೇನು ಹೇಳೊರಿಲ್ವಾ ಕೇಳೊರಿಲ್ವಾ ಈಗಾಗಲೇ ಫ್ಲೈಓವರ್ ಕಾಮಗಾರಿಯಿಂದ ಹುಬ್ಬಳ್ಳಿ ಜನತೆ ಕಂಗಲಾಗಿ ಹೋಗಿದ್ದಾರೆ, ಇಂತಹ ಸಂಧರ್ಭದಲ್ಲಿ ಹುಬ್ಬಳ್ಳಿ ಪ್ರತಿಷ್ಠಿತ ದೇಸಾಯಿ ವೃತ್ತದ ಸೇತುವೆ ಸಂಚಾರ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ ನಗರದ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದೆ...
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಪ್ರೀತಿಸಿದವನ ಜೊತೆಗೆ ಮದುವೆಯಾಗಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಶ್ವೇತಾ ಕೊಟೆನ್ನವರ ಆತ್ಮಹತ್ಯೆ ಮಾಡಿಕೊಂಡುರುವ ಯುವತಿಯಾಗಿದ್ದು, ಈಕೆಗೆ ಕೇವಲ 18 ವರ್ಷ ವಯಸ್ಸಾಗಿತ್ತು ಅಷ್ಟೇ. ಈಕೆ ಹುಬ್ಬಳ್ಳಿ ತಾಲೂಕಿನ...
ಕರ್ನಾಟಕದ ಸಂಜೀವಿನಿ ಎಂದು ಗುರುತಿಸಿಕೊಂಡಿರುವ ಹುಬ್ಬಳ್ಳಿ ಕೆ.ಎಂ.ಸಿ.ಆರ್.ಐ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಪರಿಸ್ಥಿತಿ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಊಟ ಹಾಗೂ ಉಪಹಾರ ಸೇವಿಸುವವರಿಗೆ ಆರೋಗ್ಯದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕ್ಯಾಂಟೀನ್ ಮೇಲ್ಛಾವಣಿ ಸೋರಿಕೆ ಕಾಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ತಿಳಿದುಬಂದಿದೆ....
ಗದಗ ರಸ್ತೆಯ ಗಾಂಧಿವಾಡ ಕ್ರಾಸ್‌ನಲ್ಲಿ 2023ರಲ್ಲಿ ಸಂಭವಿಸಿದ ಮಾರಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಳೇಶ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ₹2,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರಗಳ ಪ್ರಕಾರ, 2023 ರ ಜುಲೈ 23ರಂದು ಎಸ್‌ಆರ್‌ಎಸ್ ಟ್ರಾವೆಲ್ಸ್ ಸಂಸ್ಥೆಯ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಬಾಳೇಶ...
ಹುಬ್ಬಳ್ಳಿಯಲ್ಲಿ ಕಾನೂನು ಸಚಿವ H. K. ಪಾಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್ ಮಸೂದೆ ಜಾರಿಗೆ ವಿರೋಧ ವ್ಯಕ್ತವಾಗಿರುವ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದು, ಅದಕ್ಕೆ ತಕ್ಕ ಉತ್ತರ ಜನರಿಂದಲೇ ಸಿಕ್ಕಿದೆ ಎಂದು ಪಾಟೀಲ ಹೇಳಿದ್ದಾರೆ. ದೇಶದ ಒಟ್ಟು ರಾಜಕೀಯ ಸಮೀಕರಣವನ್ನೇ...
ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವ ಹುಚ್ಚಾಟಕ್ಕೆ ಮತ್ತೊಂದು ಪ್ರಾಣ ಬಲಿಯಾಗಿರುವ ದುರ್ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಅಪ್ರಾಪ್ತ ಬಾಲಕನ ಜೊತೆಗೆ ಆತನ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 19ರಂದು ಹುಬ್ಬಳ್ಳಿಯ ಶೇಜವಾಡ್ಕರ್ ಪ್ಲಾಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಲಕ್ಷ್ಮಿ ನಗರ ನಿವಾಸಿ ನಮೀಷ್ ಸಂಗಳದ್...
ಲಕ್ಷಾಂತರ ರೂಪಾಯ ನ ಸ್ಮಾರ್ಟ್ ಸಿಟಿ ಯೋಜನೆ ಒಂದೊಂದಾಗಿಯೇ ಹಳ್ಳ ಹಿಡಿಯುತ್ತಿವೆ. ಜನರಿಗೆ ಅನುಕೂಲ ಆಗುವ ಮುಂಚೆಯೇ ಅಳಿವಿನಂಚಿಗೆ ತಲುಪುತ್ತಿರುವುದು ಸ್ಮಾರ್ಟ್ ಸಿಟಿ ಯೋಜನೆ ಬೇಜವಾಬ್ದಾರಿತನ, ನಿರ್ಲಕ್ಷ್ಯತನವನ್ನ ಎತ್ತಿ ತೋರಿಸುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 4.2 ಕೋಟಿ ರೂ.ಗಳನ್ನು ಖರ್ಚು ಮಾಡಿ ಹುಬ್ಬಳ್ಳಿಯ ಗ್ಲಾಸ್ ಹೌಸ್ ನಲ್ಲಿ ಪುಟಾಣಿ ರೈಲು ಯೋಜನೆ ಅನುಷ್ಠಾನ...
ಹುಬ್ಬಳ್ಳಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ಕಾರಣವಾಗಿದೆ. ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಸ್ನೇಹಿತರ ನಡುವಿನ ಕಲಹ ಉಂಟಾಗಿದೆ. ಬರ್ತ್‌ಡೇ ಪಾರ್ಟಿಯಲ್ಲೇ ಚಾಕು ಇರಿತದ ರೂಪ ಪಡೆದುಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ...
ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರಿ ನೌಕರಿಯ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳು ವರ್ಷ ವರ್ಷ ಪರೀಕ್ಷೆಗಳಿಗೆ ತಯಾರಿ ಮಾಡುತ್ತಾರೆ. ಆದರೆ ಕೆಲವು ಕ್ಷಣದಲ್ಲಿ ಅವರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕೆಲವು ಪರೀಕ್ಷಾ ಕೇಂದ್ರಗಳು ಈ ಕನಸಿಗೆ ತಣ್ಣೀರು ಎರಚುತ್ತಿವೆ. ಹೌದು ಇಂತಹದ್ದೇ ಒಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟಾಗಿದೆ. ನಿನ್ನೆ ಮಧ್ಯಾಹ್ನ...
Dharwad News: ಕುಂದಗೋಳ ತಾಲೂಕಿನಲ್ಲಿರುವ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ನಗದು ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಗೋಳ ಪಟ್ಟಣದಿಂದ...