ChamarajNagara : ಪ್ರಕೃತಿ ಮಾನವನ ಸರ್ವತೋಮುಖ ಅಭಿವೃದ್ದಿಗೆ ತನ್ನೆಲ್ಲಾ ಸಂಪತ್ತನ್ನು ಧಾರೆ ಎರೆದಿದೆ. ಪರಿಸರದ ಸೌಂದರ್ಯವನ್ನು ನಾಚಿಸೋ ಮತ್ತೊಂದು ವಿಸ್ಮಯ ಎಲ್ಲೂ ಇಲ್ಲ. ಪ್ರಕೃತಿಯ ರಮಣೀಯ ದೃಶ್ಯಕ್ಕೆ ಮನಸೋಲದವರಿಲ್ಲ.

ಬಿಳಿಗಿರಿ ರಂಗನ ಬೆಟ್ಟದ ಮಳೆಗಾಲದ ಸೊಬಗಿಗೆ ಪ್ರವಾಸಿಗರು ದಿಲ್ ಖುಷ್ ಆಗಿದ್ದಾರೆ. ಮಂಜಿನ ಮಾಯಜಾಲಕ್ಕೆ ಮನಸೋತ ಯಾತ್ರಿಕರು ವಿಕೇಂಡ್ನಲ್ಲಿ ಬಿ.ಆರ್ ಹಿಲ್ಸ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ಈ ಬೆಟ್ಟದ ಸಾಲುಗಳಲ್ಲಿ ಮಂಜು ತುಂಬಿಕೊಂಡಾಗ ಮಂಜಿನಲ್ಲಿ ಹಸಿರು ಬೆಟ್ಟಗಳ ಸಾಲುಗಳನ್ನ ನೋಡೋಕೆ ಇನ್ನು ಅದ್ಭುತ. ಬೆಳ್ಳಿಮೋಡಗಳು ಬೆಟ್ಟದಲ್ಲಿ ಚಲಿಸುತ್ತಿದ್ರೆ, ಮತ್ತೆ ಕೆಲವೆಡೆ ಹಾಲಿನ ನೊರೆಯಂತೆ ಬೆಟ್ಟವನ್ನೆ ಮೋಡಗಳು ಆವರಿಸಿಕೊಂಡಿರುವುದು ಪ್ರವಾಸಿಗರಿಗೆ ಹಬ್ಬದಂತಿದೆ. ಇಡೀ ಕಾಡು ಮಳೆಯಿಂದಾಗಿ ಹಚ್ಚ ಹಸಿರಿನಿಂದನಿಂದ ಕಂಗೊಳಿಸುತ್ತಿದೆ.

ಹುಲಿ ರಕ್ಷಿತಾರಣ್ಯದಲ್ಲಿ ಇರುವುದರಿಂದ ಜಿಂಕೆ, ಕಾಡೆಮ್ಮ, ಆನೆಯಂತಹ ಪ್ರಾಣಿಗಳು ರಸ್ತೆಯಲ್ಲೂ ಕಂಡು ಪುಳಕಿತರಾಗುತ್ತಿದ್ದಾರೆ.ಸದ್ಯ ಮಳೆಯ ನಡುವೆಯುವ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಮಂಜಿಗೆ ಪ್ರವಾಸಿಗರು ಮನಸೋತಿದ್ದಾರೆ.ಮಳೆಯಿಂದಾದಗಿ ಬೆಟ್ಟದ ಪ್ರಕೃತಿ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಈ ಪ್ರಕೃತಿ ಸೊಬಗು ಪ್ರವಾಸಿಗರನ್ನ ಸೂಜಿ ಗಲ್ಲಿನಂತೆ ಸೆಳೆಯುತ್ತಿದೆ.
walking path: ವಾಯುವಿಹಾರಕ್ಕೆ ತೆರಳಲು ಭಯವಾಗುತ್ತಿದೆ, ಹಾವುಗಳ ಕಾಟ ಹೆಚ್ಚಿದೆ..!




