U.T Khadar : ಮೀನುಗಾರರ ಸಮಸ್ಯೆ  ಪರಿಹಾರಕ್ಕೆ ನಾನು ಸದಾ ಸಿದ್ಧ: ಯು.ಟಿ ಖಾದರ್

Karavali News: ಸುರತ್ಕಲ್ : ಕರಾವಳಿಯ ಮೀನುಗಾರರ ಬದುಕನ್ನು ನಾನು ತೀರಾ ಹತ್ತಿರದಿಂದ ಕಂಡ ವನು. ಶ್ರಮಜೀವಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಹುದ್ದೆಯ ವ್ಯಾಪ್ತಿಯ ನೆಲೆಯಲ್ಲಿ ಸಹಾಯಹಸ್ತ ನೀಡಲು ಸದಾ ಸಿದ್ಧನಿರುವೆ ನು ಎಂದು ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು. ಟಿ. ಖಾದರ್ ಅವರು ಅಭಿಪ್ರಾಯ ಪಟ್ಟರು.

ಜುಲೈ ತಾ.8 ರಂದು ಪಣಂಬೂರು ಮೊಗವೀರ ಸಮುದಾಯ ಭವನ,ಚಿತ್ರಾಪುರ ಇಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ  ಸಭಾಪತಿ ಯು.ಟಿ ಖಾದರ್ ಮಾತನಾಡಿ ಹೀಗೆಂದರು.

ಕರಾವಳಿಯಲ್ಲಿ ಜೆಟ್ಟಿ ನಿರ್ಮಾಣ,ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವುದು ಅಲ್ಲದೆ ಮೀನುಗಾರರ ಹಕ್ಕೊತ್ತಾಯ ಬಗ್ಗೆ ಚಿಂತನೆ ನಡೆಸಿ, ಕ್ರಮ ಕೈ ಗೊಳ್ಳುವು ದಾಗಿ   ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಈ ಭಾಗದ ಮೊಗವೀರ ಸಮಾಜದ ಕಷ್ಟ_ನಷ್ಟ ಗಳಿಗೆ ಶಾಸಕತ್ವ ದ ಮೊದಲ ಅವಧಿಯಲ್ಲಿ ಸಾಕಷ್ಟು ನೆರವು, ಸಹಕಾರ ನೀಡಿ ಸ್ಪಂದಿಸಿ ದ್ದೇನೆ. ಈ ಸಹಕಾರ ಮುಂದಕ್ಕೂ ಇರುತ್ತದೆ ಎನ್ನುವ ಭರವಸೆ  ಶಾಸಕ ಭರತ್ ಶೆಟ್ಟಿ ವ್ಯಕ್ತ ಪಡಿಸಿದರು.

 

K.Venkatesh : ವಾಕಿಂಗ್ ಪಾತ್ ಇದ್ದರೂ ವಾಕ್ ಮಾಡಲಾಗುತ್ತಿಲ್ಲ..?! ವಾಯುವಿಹಾರಕ್ಕೆ ಏನಿದು ತಡೆ..?!

Bustand: ಮಳೆಯಿಂದಾಗಿ ಹಾಳಾದ ಬಸ್ ನಿಲ್ದಾಣ

Vidhana soudha : ಕಲಾಪಕ್ಕೆ ಆಗಮಿಸಿದ ಮಹಿಳೆ ಬ್ಯಾಗ್ ನಲ್ಲಿ ಚಾಕು…!

About The Author