ಹುಣಸೂರಿನ:- ಮಳೆಗಾಲ ಶುರುವಾದಾಗಿನಿಂದ ಸಾರ್ವಜನಿಕರು ಓಡಾಡುವ ರಸ್ತಗಳೆಲ್ಲ ಸಂಪೂರ್ಣ ಹಾಳಾಗಿ ಜನರು ರಸ್ತೆಗಿಳಿಯಲು ಪರದಾಡುವಂತಾಗಿದೆ ರಸ್ತೆ ಮಾತ್ರಗಳಲ್ಲದೆ ಬಸ್ಸು ನಿಲ್ದಾಣ ಕೂಡಾ ಸಂಪೂರ್ಣ ಹದಗೆಟ್ಟಿವೆ ನಾವು ಇಲ್ಲಿ ತೋರಿಸುತ್ತಿರುವ ಬಸ್ಸು ನಿಲ್ದಾಣ ಹುಣಸೂರು ನಗರ ಬಸ್ ನಿಲ್ದಾಣ ಬಸ್ಸನ್ನು ಹತ್ತಲು ಜನಗಳು ಹಿಂಜರಿಯುತಿದ್ದಾರೆ.
ಹುಣಸೂರು ಹೃದಯ ಭಾಗದಲ್ಲಿರುವ ಹಳೆ ಬಸ್ ಸ್ಟ್ಯಾಂಡ್ ಒಳಗೆ ಹೋಗುವ ರಸ್ತೆ ಸಂಪೂರ್ಣ ಹದಗಟ್ಟಿದೆ ರಸ್ತೆಯ ಮೇಲಿರುವ ಡಾಂಬಾರ್ ಕಿತ್ತು ಹೋಗಿ ಮಳೆ ನೀರು ನಿಂತು ಜನರು ಓಡಾಡಲು ಆಗದ ಪರೀಸ್ಥಿತಿ ಎದುರಾಗಿದೆ ಪ್ರತಿದಿನ ಸಾವಿರಾರು ಸಾರ್ವಜನಿಕರು ಓಡಾಡುವ ಸ್ಥಳ ಇದಾಗಿದ್ದು ಇದುವರೆಗೂ ಯಅವ ಅಧಿಕಾರಿಗಳೂ ಕೂಡಾ ಇತ್ತ ಕಡೆ ಗಮನ ಹರಿಸಿಲ್ಲ.
ಹುಣಸೂರು ಶಾಸಕರಾದ ಜಿ ಡಿ ಹರೀಶ ಗೌಡ ಅವರು ಜನರು ಓಡಾಡಲು ಆಗುತ್ತಿಲ್ಲ ಆದಸ್ಟು ಬೇಗ ಇವುಗಳನ್ನು ದುರಸ್ಥಿ ಮಾಡಿಸಿ ಜನರ ಕಷ್ಟಕ್ಕೆ ನೆರವಾಗಿ ಇವುಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಿ ಎಂದು ಮನವಿ ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ