ಮೈಸೂರು: ಮಾನಸಿಕ ಖಿನ್ನತೆಗೆ ಒಳಗಾದಂತಹ ಶಿವಪ್ಪ ದೇವರು ಎನ್ನುವಂತಹ ಮೈಸೂರು ಜಿಲ್ಲೆಯ ಟಿ ನರಸೀಪುರದ ದೇವನೂರು ಮಠದ ಕಿರಿಯ ಸ್ವಾಮಿಜಿಯೊಬ್ಬರು ಮುಡುಕುತೊರೆ ಎಂಬಲ್ಲಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕಲಿಯೂರು ಗ್ರಾಮದವರಾಗಿರುವ ಶಿವಪ್ಪ ದೇವರು ಸ್ವಾಮಿಜಿಗಳು ಕಳೆದ 45 ವರ್ಷಗಳಿಂದ ದೇವನೂರು ಮಠದ ಸ್ವಾಮಿಜಿಗಳಲ್ಲಿ ಶಿಷ್ಯರಾಗಿ ಸೇವೆ ಸಲ್ಲಿಸುತಿದ್ದರು ಅನಾರೋಗ್ಯದಿಂದ ಬಳಲುತ್ತಿರುವ ಸ್ವಾಮಿಜಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಶಿವಪ್ಪ ಸ್ವಾಮಿಜಿಗಳು ಭಕ್ತವೃಂದದಲ್ಲಿ ಉತ್ತಮ ಒಡನಾಟವನ್ನು ಹೊಂದಿದ್ದರು.ಇವರು ಕಳೆದೆರಡು ದಿನಗಳ ಹಿಂದೆಯೆ ಕಾಣೆಯಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶಿಲನೆ ನಡೆಸುತಿದ್ದಾರೆ.
ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..
.