Spiritual: ಮಂಗಳೂರು- ಉಡುಪಿ-ಕುಂದಾಪುರ ಈ ಮೂರು ಜಾಗಗಳಲ್ಲಿ ಪ್ರಸಿದ್ಧವಾದ ದೇವಿಯ ದೇವಸ್ಥಾನ ಅಂದ್ರೆ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ. ದುರ್ಗಾ ಪರಮೇಶ್ವರಿಯನ್ನು ಪೂಜಿಸಲ್ಪಡುವ ಈ ದೇವಸ್ಥಾನವನ್ನು ಕಟ್ಟಿದ್ದು ಓರ್ವ ಮುಸ್ಲಿಂ ವ್ಯಕ್ತಿ ಅಂದರೆ ನೀವು ನಂಬಲೇಬೇಕು. ಹಾಗಾದ್ರೆ ಆ ಮುಸ್ಲಿಂ ವ್ಯಕ್ತಿ ಈ ದೇವಿಯ ದೇವಸ್ಥಾನ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಕರಾವಳಿಯ ಮುಲ್ಕಿಯಲ್ಲಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವಿದೆ. 800 ವರ್ಷಗಳ ಹಿಂದೆ ಕೇರಳದ ಬಪ್ಪ ಎಂಬ ಬ್ಯಾರಿ ದೋಣಿ ದುರಂತದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು, ಮುಲ್ಕಿಗೆ ಬರುತ್ತಾನೆ. ಇಲ್ಲಿ ಶಾಂಭವಿ ನದಿಯಲ್ಲಿ ದೋಣಿ ನಡೆಸಿಕೊಂಡು ವ್ಯಾಪಾರಕ್ಕೆಂದು ಹೋಗುವಾಗ, ಅವನ ದೋಣಿ, ಕಲ್ಲಿನ ಬಂಡೆಗೆ ತಾಕಿ, ರಕ್ತ ಸುರಿಯುತ್ತದೆ. ಬಪ್ಪ ಬ್ಯಾರಿ ಹೆದರಿ, ಅಲ್ಲಿನ ಅರಸರ ಬಳಿ ಈ ಬಗ್ಗೆ ಕೇಳಿದಾಗ, ಅವರು ಜ್ಯೋತಿಷಿಗಳ ಬಳಿ ಕೇಳುತ್ತಾರೆ.
ಆ ಜ್ಯೋತಿಷಿಗಳು, ಅಲ್ಲಿ ದುರ್ಗಾಪರಮೇಶ್ವರಿ ನೆಲೆಸಿದ್ದಾಳೆ. ಆಕೆಗೆ ದೇವಸ್ಥಾನ ನಿರ್ಮಿಸಬೇಕಾಗಿದೆ. ಹಾಗಾಗಿ ಆಕೆ ಬಪ್ಪ ಬ್ಯಾರಿಯ ಮೂಲಕ, ಈ ಸೂಚನೆ ಕೊಟ್ಟಿದ್ದಾಳೆಂದು ಹೇಳುತ್ತಾರೆ. ಬಪ್ಪ ಬ್ಯಾರಿ, ಅಲ್ಲಿನ ಅರಸರ ಸಹಾಯದಿಂದ ದುರ್ಗಾಪರಮೇಶ್ವರಿಗೆ ದೇವಸ್ಥಾನ ಕಟ್ಟಿಸುತ್ತಾನೆ. ಹಾಗಾಗಿಯೇ ಈ ಕ್ಷೇತ್ರವನ್ನ ಬಪ್ಪನಾಡು ಎಂದು ಕರೆಯುತ್ತಾರೆ.
ಇಂದಿಗೂ ಬಪ್ಪಬ್ಯಾರಿಯ ವಂಶಸ್ಥರು, ರಥೋತ್ಸವದ ಸಂದರ್ಭದಲ್ಲಿ ಇದ್ದು, ಗಂಧ ಪ್ರಸಾದ ಪಡೆಯುತ್ತಾರೆ. ಬಪ್ಪ ಬ್ಯಾರಿಯ ಮನೆ ಎದುರು ಪ್ರಸಾದ ವಿತರಿಸಲಾಗುತ್ತದೆ. ಬಪ್ಪ ಬ್ಯಾರಿಯ ವಂಶಸ್ಥರು ಪ್ರಸಾದವನ್ನು ಸ್ವೀಕರಿಸಿ, ದೇವಿಯ ಆಶೀರ್ವಾದ ಪಡೆಯುತ್ತಾರೆ.
ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..