- Advertisement -
ನೈರುತ್ಯ ರೈಲ್ವೆ: ಉತ್ತರಖಂಡದ ಕಾಶಿಪುರದಲ್ಲಿ ಜುಲೈ 4 ರಿಂದ 7 ರವರೆಗೆ ನಡೆದ 19ನೇ ಅಖಿಲ ಭಾರತ ರೈಲ್ವೆ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ವಲಯವು ಚಾಂಪಿಯನ್ ಆಗಿದ್ದಾರೆ.
ಪವರ್‌ಲಿಫ್ಟಿಂಗ್ ಚಾಂಪಿಯನ್ ಆಗಿರುವ ತಂಡವನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಬುಧವಾರ ಹುಬ್ಬಳ್ಳಿಯ ಪ್ರಧಾನ ಕಛೇರಿಯಲ್ಲಿ ಪವರ್ ಲಿಫ್ಟಿಂಗ್ ತಂಡದ ಸದಸ್ಯರನ್ನು ಅಭಿನಂದಿಸಿದರು. ನಂತರ ಮಾತನಾಡಿದ ಪ್ರಧಾನ ವ್ಯವಸ್ಥಾಪಕರು, ಎಲ್ಲಾ ಸದಸ್ಯರ ಪರಿಶ್ರಮದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಂಡವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿರುವ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಶ್ರೀ ಯು ಸುಬ್ಬರಾವ್, ಉಪ ಹಣಕಾಸು ಸಲಹೆಗಾರ ಹಾಗೂ ನೈರುತ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೀ ಅಜಯ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
- Advertisement -