Thursday, November 27, 2025

Latest Posts

G.R.Jagadeesh : ಬಡವರ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ಶ್ರಮಿಸುವುದು-ಜಿ.ಆರ್.ದಿನೇಶ್

- Advertisement -

Banglore News: ಬೆಂಗಳೂರುನಗರ, ಕಾಂಗ್ರೆಸ್ ಭವನ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸ್ ಷ್ಟ್ರಕ್ಷನ್ ಅಂಡ್ ವುಡ್ ವರ್ಕಸ್ ಫೆಡರೇಷನ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಜಿ.ಆರ್.ದಿನೇಶ್ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜಿ.ಆರ್ ದಿನೇಶ್ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಜಿ.ಆರ್.ದಿನೇಶ್ ರವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಜಿ.ಆರ್.ದಿನೇಶ್ ರವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ಐ.ಎನ್.ಬಿ.ಸಿ.ಡಬ್ಲ್ಯೂ.ಎಫ್ ಫಟಕ ಪದಾಧಿಕಾರಿಗಳು, ಕಾರ್ಯಕರ್ತರು ಹಗಲಿರುಳು ಶ್ರಮ  ವಹಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಯಶ್ವಸಿಯಾಗಿ ಸರ್ಕಾರ ಸಾಗುತ್ತಿದೆ. ಕಾಂಗ್ರಸ್ ಪಕ್ಷದ ಬಡವರ ಪರ ಹೋರಾಟ ಮಾಡುವ ಪಕ್ಷವಾಗಿದೆ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು, ಮರಗೆಲಸ ಮಾಡುವ ಕುಟುಂಬಗಳು ಶೇಕಡ 80ಲಕ್ಷ ಜನಸಂಖ್ಯೆ ಇದೆ.

ಕಾಂಗ್ರೆಸ್ ಪಕ್ಷದ 5ಗ್ಯಾರಂಟಿ ಯೋಜನೆಗಳು ರಾಜ್ಯದ 7ಕೋಟಿ ಜನರ ಮನೆ ಬಾಗಿಲಿಗೆ ತಲುಪಲಿದೆ. ಶಕ್ತಿಯೋಜನೆಯಿಂದ 16ಕೋಟಿ ಮಹಿಳೆಯರು ಉಚಿತವಾಗಿ ಪ್ರವಾಸ ಮಾಡಿದ್ದಾರೆ, 4ಕೋಟಿ ಜನರಿಗೆ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಅಕ್ಕಿ ಮತ್ತು ಧನಭಾಗ್ಯ ಸಿಗಲಿದೆ ಹಾಗೂ 200ವಿದ್ಯುತ್ ಯೂನಿಟ್ ವಿದ್ಯುತ್ ಉಚಿತ. ಕಾಂಗ್ರೆಸ್ ಪಕ್ಷ ಬಡವರ ಏಳಿಗೆಗಾಗಿ ಶ್ರಮಿಸುವ ಪಕ್ಷವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಿದರು.

Jinke park- ಕೊಪ್ಪಳದಲ್ಲಿ ಜಿಂಕೆ ಪಾರ್ಕ್ ನಿರ್ಮಾಣಕ್ಕೆ ರೈತ ಸಂಘ ಆಕ್ರೋಶ

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ

- Advertisement -

Latest Posts

Don't Miss