Banglore News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮನ್ನು ಭೇಟಿಯಾದ ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಬ್ರಾಂಡ್ ಚೆಂಗ್ ಅವರ ನೇತೃತ್ವದ ನಿಯೋಗದ ಜತೆ ಸಮಾಲೋಚನೆ ನಡೆಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ , ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಕೈಗಾರಿಕೆ ಅಭಿವೃದ್ದಿ ಗಳ ಕುರಿತಾಗಿ ಚರ್ಚಿಸಲಾಯಿತು.
ಇನ್ನು ಸಭೆಯಲ್ಲಿ ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಬ್ರಾಂಡ್ ಚೆಂಗ್ ಅವರಿಗೆ ವಿಭಿನ್ನವಾದ ನೆನಪಿನ ಕಾಣಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.
ಸಭೆಯಲ್ಲಿ ರೂ. 8,800 ಕೋಟಿ ಹೂಡಿಕೆಯೊಂದಿಗೆ ಫಾಕ್ಸ್ ಕಾನ್ ಅಂಗಸಂಸ್ಥೆಯಿಂದ ಮತ್ತೊಂದು ಬೃಹತ್ ಉದ್ದಿಮೆ ಸ್ಥಾಪನೆಯ ಕುರಿತು, ಆ್ಯಪಲ್ ಫೋನ್ ನ ಹೊರ ಕವಚ ತಯಾರಿಕೆ ಯ ಬಗ್ಗೆ , 14,000+ ಉದ್ಯೋಗ ಸೃಷ್ಠಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ
ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು