Karkala News: ಶಿರ್ವ : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ರವರು ಎಮ್‍ಎಸ್‍ಎಮ್‍ಇ ಇನ್‍ಕ್ಯುಬೇಶನ್ ಯೋಜನೆಯಡಿಯಲ್ಲಿ ಅಭಿವೃದ್ದಿ ಪಡಿಸಿದ ಡೆವಲಪ್‍ಮೆಂಟ್ ಆಫ್ ಟ್ರೀ ಡಿ-ಲಿಂಬರ್ ಫಾರ್ ಶೇಡ್ ಟ್ರೀಸ್ ಇನ್ ಕಾಫಿ ಪ್ಲಾಂಟೇಶನ್ ಶಿರ್ಷಿಕೆಯ ಯೋಜನೆಗಾಗಿ ಭಾರತ ಸರ್ಕಾರದಿಂದ ಸ್ಟಾರ್ಟ್-ಅಪ್ ಧನಸಹಾಯ 10.625 ಲಕ್ಷ ಮಂಜೂರಾಗಿದೆ.
ಭಾರತ ಸರ್ಕಾರದ ಎಮ್‍ಎಸ್‍ಎಮ್‍ಇ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಐಡಿಯಾ ಹ್ಯಾಕಥಾನ್ 2.0ರಲ್ಲಿ ಈ ಯೋಜನೆಯು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಯೋಜನೆಯ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆರ್ಥಿಕತೆಗೆ ಕೊಡುಗೆ ನೀಡಿ ಸಾಂಪ್ರಾದಾಯಿಕ ಚಟುವಟಿಕೆಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ಜ್ಞಾನಾಧಾರಿತ ನವೀನ ಉದಯೋನ್ಮುಖ ಉದ್ಯಮಗಳನ್ನು ಉತ್ತೇಜಿಸುವುದು ಇದರ ಮುಖ್ಯ ಉದೇಶವಾಗಿದೆ.
ಮಳೆಗಾಲದಲ್ಲಿ ಕಾಫಿ ತೋಟದಲ್ಲಿನ ನೆರಳಿನ ಮರಗಳ ಕೊಂಬೆಗಳನ್ನು ಕತ್ತರಿಸಿ ಪಶ್ಚಿಮ ಘಟ್ಟಗಳಲ್ಲಿ ಕಾಫಿ ಬೆಳೆಗಾರರಿಗೆ ಸಹಾಯ ಮಾಡುವುದು ಮತ್ತು ಕೂಲಿಕಾರರ ಪರಿಶ್ರಮವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ತಂತ್ರಜ್ಞಾನವು ಮುಖ್ಯವಾಗಿ ಕಾಫಿ ಗಿಡದ ಕೊಂಬೆಗಳನ್ನು ಕತ್ತರಿಸುವ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಸಹಕಾರಿಯಾಗಿದೆ.
ಕಾರ್ತಿಕ್ ಅವರ ಅತ್ಯುತ್ತಮ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Grama Panchayath : ರಸ್ತೆಗುಂಡಿಗಳ ಮುಚ್ಚುವ ಕಾರ್ಯದಲ್ಲಿ ಭಾಗಿಯಾದ ಪಂಚಾಯತ್ ಸದಸ್ಯರು