Film News: ರಾಬರ್ಟ್ ಸುಂದರಿ ಆಶಾ ಭಟ್ ಅವರು ಸದ್ಯ ಕರುನಾಡು ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಶಿವಮೊಗ್ಗದವರಾದ ಆಶಾ ಭಟ್ ಡಿ ಬಾಸ್ ದರ್ಶನ್ ಗೆ ನಾಯಕಿಯಾಗಿ ರಾಬರ್ಟ್ ಸಿನಿಮಾದಲ್ಲಿ ಮಿಂಚಿದ್ರು. ಕಣ್ಣೇ ಅದಿರಿಂದ್ ಸಾಂಗ್ ನ ನೃತ್ಯಕ್ಕೆ ಕರುನಾಡ ಜನಮನಗೆದ್ದು ಮನೆ ಮಾತಾದರು. ಇದೀಗ ಆಶಾ ಭಟ್ ಕರುನಾಡಿನ ಸೊಬಗನ್ನು ವರ್ಣಿಸಿ ಮತ್ತೆ ಸುದ್ದಿಯಾಗಿದ್ದಾರೆ.
ರಾಬರ್ಟ್ ಚೆಲುವೆ ಆಶಾ ಭಟ್ ನಂದಿ ಬೆಟ್ಟದ ಮೇಲಿರುವ ಭೋಗನಂದೀಶ್ವರ ದೇಗುಲಕ್ಕೆ ಭೇಟಿ ನೀಡಿ ಸೀರೆ ಉಟ್ಟು ಮಿಂಚಿದರು. ಜೊತೆಗೆ ದೇಗುಲದ ಕಂಪಿನಲ್ಲಿ ಮೈಮರೆತೆನು ಎಂಬುವುದಾಗಿ ಟ್ವಿಟರ್ ನಲ್ಲಿ ದೇಗುಲದ ಸೌಂದರ್ಯವನ್ನು ಬಣ್ಣಿಸಿದರು. ದ್ರಾವಿಡ ವಾಸ್ತು ಶಿಲ್ಪ , ಶಾಂತಿಯುತ ಸ್ಥಳ ಮತ್ತು ಆಧ್ಯಾತ್ಮಿಕ ಕಂಪನಗಳ ಸಂಯೋಜನೆಯು ಪ್ರತಿಯೊಬ್ಬರೂ ಅನ್ವೇಷಿಸಬೇಕಾದ ಗುಪ್ತ ರತ್ನವಾಗಿದೆ. ಎಂಬುವುದಾಗಿ ಟ್ವಿಟರ್ ನಲ್ಲಿ ಬಣ್ಣಿಸಿದ್ದಾರೆ.
ಇದು ಕನ್ನಡಿಗರಿಗೆ ಇಷ್ಟವಾದ ಟ್ವೀಟ್ ಆಗಿದ್ದು ಅವರ ಸಾಂಸ್ಕೃತಿಕ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Beauty of Namma #Karnataka ! ❤️
Visited the Bhoganandiswara Temple atop the Nandi Hills and was mesmerized by its sacred vibes. Breathtakingly beautiful! ✨The combination of the dravidian architecture, peaceful location, and spiritual vibrations makes it a hidden gem that… pic.twitter.com/103QDwYqs9
— Asha Bhat (@StarAshaBhat) July 17, 2023
ಪ್ರೇಕ್ಷಕರ ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ
ಜುಲೈ 21 ರಂದು ಬಿಡುಗಡೆಯಾಗಲಿದೆ ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ “ಡೇವಿಡ್”